ಕಾರವಾರ (Karwar) : ಭಟ್ಕಳ ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮವೊಂದರಲ್ಲಿ ಸಂಚಾರ ನಿಷೇಧ (road block) ಹೇರಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ ವ್ಯಾಪ್ತಿಯ ತಲಗೋಡ ಗೊಂಡರಕೇರಿಯಲ್ಲಿ ಗುಡ್ಡ ಕುಸಿಯುವ (landslide) ಸಂಭವವಿದೆ. ವಾಡಿಕೆಗಿಂತ ಹೆಚ್ಚಿನ ಮಳೆ (heavy rain) ಸುರಿಯುತ್ತಿರುವುದರಿಂದ ಅವಘಡ ಸಾಧ್ಯತೆ ಹೆಚ್ಚಿದೆ.

ಇದನ್ನು ಓದಿ : Lightning/ ಭಟ್ಕಳದಲ್ಲಿ ಸಿಡಿಲು ಬಡಿದು ದನದ ಕೊಟ್ಟಿಗೆ ಭಸ್ಮ

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತಾ ಹಿತದೃಷ್ಟಿಯಿಂದ ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳು ತಡೆಯುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈ ರಸ್ತೆಯಲ್ಲಿ ವಾಹನ/ಸಾರ್ವಜನಿಕ ಸಂಚಾರವನ್ನು ಜೂ. ೧೨ ರಿಂದ ಮಳೆಗಾಲ ಮುಕ್ತಾಯವಾಗುವವರೆಗೆ ನಿರ್ಬಂಧಿಸಲಾಗಿದೆ (road block). ಸದರಿ ರಸ್ತೆಯ ಪರ್ಯಾಯವಾಗಿ ಭಟ್ಕಳ ಮುಗ್ಧಮ್ ಕಾಲೋನಿ ಮುಖಾಂತರ ಪಥ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.

ಇದನ್ನು ಓದಿ : landslide/ ಭಟ್ಕಳ ಬಂದರಿನಲ್ಲಿ ಭೂಕುಸಿತದ ಆತಂಕ