ಭಟ್ಕಳ (Bhatkal) : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿಜಯದಶಮಿ ಪ್ರಯುಕ್ತ ಗಣವೇಷಧಾರಿ ಸ್ವಯಂಸೇವಕರ ಭವ್ಯ ಪಥಸಂಚಲನಕ್ಕೆ (RSS route march) ನ್ಯೂ ಇಂಗ್ಲಿಷ್ ಶಾಲಾ ಆವರಣದಲ್ಲಿ ಚಾಲನೆ ನೀಡಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನ್ಯೂ ಇಂಗ್ಲಿಷ್ ಶಾಲಾ ಆವರಣದದಿಂದ ಪ್ರಾರಂಭವಾದ ಪಥ ಸಂಚಲನವು ಎರಡು ಮಾರ್ಗದಲ್ಲಿ ಸಂಚಾರ ಮಾಡಿತು.  ಮೊದಲ ಮಾರ್ಗದಲ್ಲಿ ದಿ ನ್ಯೂ ಇಂಗ್ಲೀಷ್ ಸ್ಕೂಲ್‌ ಮಾರ್ಗವಾಗಿ ಸೋನಾರಕೇರಿ, ಆಸರಕೇರಿ, ಮುಖ್ಯರಸ್ತೆ, ಮಾರಿಕಾಂಬ ದೇವಸ್ಥಾನ, ರಥಬೀದಿ, ಹೂವಿನ ಪೇಟೆ, ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ, ಪಿ.ಎಲ್.ಡಿ ಬ್ಯಾಂಕಿನ ಎದುರುಗಡೆ ರಾಷ್ಟ್ರೀಯ ಹೆದ್ದಾರಿ ಮೂಲಕ ಭಟ್ಕಳ ಸರ್ಕಲ್‌ ಪ್ರವೇಶಿಸಿತು.

ಇದನ್ನೂ ಓದಿ :   ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್

ಇನ್ನೊಂದು ಮಾರ್ಗದಲ್ಲಿ  ದಿ ನ್ಯೂ ಇಂಗ್ಲೀಷ್ ಸ್ಕೂಲ್ ಮೂಲಕ ಬಂದರ ರಸ್ತೆ, ಭಟ್ಕಳ ಸರ್ಕಲ್‌, ಸಾಗರ ರಸ್ತೆ, ನಾಯಕಹೆಲ್ತ್ ಸೆಂಟರ್, ನಾಗಪ್ಪ ನಾಯಕ ರಸ್ತೆ , ಡಿ.ಪಿ ಕಾಲೋನಿ ರಸ್ತೆ, ಸುಧೀಂದ್ರ ಕಾಲೇಜು ಹಿಂಭಾಗ, ಮೇಲಹಿತ್ಲು,  ಹುರುಳಿಸಾಲ ,  ಸಾರ್ವಜನಿಕ ಗಣೇಶೋತ್ಸವ ಭವನ, ನಾಗಪ್ಪ ನಾಯಕ ರಸ್ತೆ ಮಾರ್ಗವಾಗಿ , ಡಾ. ಚಿತ್ತರಂಜನ ಮನೆ ಕ್ರಾಸ್‌, ಹಳೇ ವೈಭವ ಹೋಟೆಲ್‌ ಎದುರುಗಡೆಯಿಂದ ಪುನಃ ಭಟ್ಕಳ ಸರ್ಕಲ್‌ ಪ್ರವೇಶಿಸಿತು. ಈ ವೇಳೆ ಎರಡು ಮಾರ್ಗದಿಂದ ಹೊರಟ ಪಥ ಸಂಚಲನವು ಸರ್ಕಲ್‌ ನಲ್ಲಿ ಏಕಕಾಲಕ್ಕೆ ತಲುಪಿ ಸಂಗಮಗೊಂಡು ಪುನಃ ನ್ಯೂ ಇಂಗ್ಲಿಷ್ ಶಾಲಾ ಮೈದಾನದಲ್ಲಿ ಅಂತ್ಯಗೊಂಡಿತು.

ಇದನ್ನೂ ಓದಿ :   ಸಾಗರ ತಾಲೂಕಿನಲ್ಲಿ ಚಿರತೆ ಕಾಟ

ಈ ಪಥ ಸಂಚಲನದಲ್ಲಿ (RSS route march) ಸಣ್ಣ ಸಣ್ಣ ಮಕ್ಕಳು,  ನೆಹರೂ ರಸ್ತೆಯ ನಿವಾಸಿ ೮೭ ವರ್ಷದ ವೃದ್ಧ ವಿಠ್ಠಲ ರಾಮ ಪ್ರಭು ಭಾಗಿಯಾಗಿರುವುದು ವಿಶೇಷವಾಗಿತ್ತು. ಪಥ ಸಂಚಲನದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಬಳಿಕ ಸಾರ್ವಜನಿಕ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ್ಯದ ಸಂಚಾಲಕ ಗೋಪಾಲ ಬಳ್ಳಾರಿ ಮಾತನಾಡಿದರು. ಈ ವೇಳೆ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಭಟ್ಕಳದ ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು.

ಇದನ್ನೂ ಓದಿ :  ಜ್ಞಾನೇಶ್ವರಿ ಕಾಲೇಜಿನಲ್ಲಿ ದೀಪದಾನ ಕಾರ್ಯಕ್ರಮ

ಪಥಸಂಚಲನದ ಭದ್ರತೆಗಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಇಬ್ಬರು ಡಿ.ಎಸ್.ಪಿ, ೭ ಪಿಐ, ೨೭ ಪಿಎಸ್‌ಐ, ೨೫ ಎ.ಎಸ್.ಐ, ೩೦೯ ಹೆಡ್‌ಕಾನ್ಸ್‌ಟೇಬಲ್‌ಗಳು, ಕಾನ್ಸ್‌ಟೇಬಲ್‌ಗಳು, ಎರಡು ಕೆ.ಎಸ್.ಆರ್.ಪಿ ಮತ್ತು ೫ ಡಿ.ಎ.ಆರ್‌. ತುಕಡಿಗಳನ್ನು ಪಥಸಂಚಲನ ನಡೆಯುವ ಕಡೆ ನಿಯೋಜಿಸಲಾಗಿತ್ತು. ಇದಲ್ಲದೇ ಜಿಲ್ಲಾ ಉಪ ಪೊಲೀಸ್‌ ವರಿಷ್ಠಾಧಿಕಾರಿ, ಭಟ್ಕಳ ಡಿವೈಎಸ್ಪಿ ಕೆ. ಮಹೇಶ, ಶಿರಸಿ ಡಿವೈಎಸ್ಪಿ ಕೆ.ಎಲ್. ಗಣೇಶ, ನಗರ ಠಾಣೆಯ ಸಿ.ಪಿ.ಐ. ಮಾರ್ಗದರ್ಶನದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಶಧಾರಿಗಳ ಶಿಸ್ತುಬದ್ಧ, ಆಕರ್ಷಕ ಪಥ ಸಂಚಲನದ ವಿಡಿಯೋವನ್ನು  ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ :  ಹಿರಿಯ ಸಾಮಾಜಿಕ ಹೋರಾಟಗಾರ ನಿಧನ