ಭಟ್ಕಳ: ತಾಲೂಕಿನ ಕರಿಕಲ್ ಸಮುದ್ರ ಕಿನಾರೆಯಲ್ಲಿರುವ ಶ್ರೀ ರಾಮ  ಧ್ಯಾನ ಮಂದಿರದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ(RV Deshapande) ಭೇಟಿ ಮಾಡಿ ಆಶೀರ್ವಾದ ಪಡೆದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಈ ವೇಳೆ ಮಾತನಾಡಿದ ಆರ್.ವಿ ದೇಶಪಾಂಡೆ(RV Deshapande),  ಲೋಕಕಲ್ಯಾಣದ ಚಿಂತನೆ, ನಾಡಿನ ಸುಭಿಕ್ಷೆಗಾಗಿ, ತ್ಯಾಗದ ಮೂಲಕವೇ ಸೇವಾ ಕೈoಕರ್ಯವನ್ನು ಮುಂದುವರೆಸಿರುವ ಆಧ್ಯಾತ್ಮಿಕ ಚಿಂತನೆಯ ತಪಸ್ವಿಗಳು ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಪೂಜ್ಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು. ಶ್ರೀಗಳು ಭಟ್ಕಳ ತಾಲೂಕಿನ ಕರಿಕಲ್ ಶ್ರೀರಾಮ ಧ್ಯಾನ ಮಂದಿರದಲ್ಲಿ ಪವಿತ್ರ ಚಾತುರ್ಮಾಸ್ಯ ವ್ರತಾಚರಣೆಯನ್ನು ಸಂಕಲ್ಪಿಸಿದ್ದಾರೆ.  ಜನರಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಭಾವನೆಯನ್ನು ಜಾಗೃತಗೊಳಿಸುವ ಮೂಲಕ ನಾಡಿನ ಶ್ರೇಯೋಭಿವೃದ್ಧಿಗಾಗಿ ಶ್ರೀಗಳು ವೃತ ಪ್ರಾರಂಭಿಸಿರುವುದು ಪುಣ್ಯದ ಕೆಲಸ ಎಂದರು.

ಇದನ್ನೂ ಓದಿ : ಜುಲೈ ೨೯ರಂದು ವಿವಿಧೆಡೆ ಅಡಿಕೆ ಧಾರಣೆ

ಈ ವೇಳೆ ಸ್ವಾಮೀಜಿಯವರು ಆರ್.ವಿ ದೇಶಪಾಂಡೆ ಅವರಿಗೆ ಮಂತ್ರಾಕ್ಷತೆ ನೀಡಿ, ಶಾಲು ಹೊದೆಸಿ ಸನ್ಮಾನಿಸಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಠ್ಠಲ ನಾಯ್ಕ, ಸ್ಥಳೀಯ ಮುಖಂಡರು ದೇಶಪಾಂಡೆ ಅವರ ಜೊತೆಗಿದ್ದರು.

ಇದನ್ನೂ ಓದಿ : ಹಳ್ಳದಲ್ಲಿ ಬಿದ್ದು ಕೃಷಿಕ ಸಾವು