ಭಟ್ಕಳ: ಧಾರವಾಡದ (Dharwad) ಕರ್ನಾಟಕ ವಿಶ್ವವಿದ್ಯಾಲಯವು (Karnataka University) ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ (shuttle badminton) ಕ್ರೀಡೆಯಲ್ಲಿ ಭಟ್ಕಳದ (Bhatkal) ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ, ಭಟ್ಕಳ ತಾಲೂಕಿನ ಕವಿತಾ ನಾಯ್ಕ ಹಾಗೂ ಆರಕ್ಷಕರಾಗಿರುವ ದೇವು ನಾಯ್ಕರವರ ಪುತ್ರಿ ಸಾಕ್ಷಿ ನಾಯ್ಕ ಯುನಿವರ್ಸಿಟಿ ಬ್ಲೂ (University blue) ಆಗಿ ಆಯ್ಕೆಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆಂಧ್ರಪ್ರದೇಶದ ಎನ್.ಟಿ.ಆರ್. ವಿಶ್ವವಿದ್ಯಾಲಯದಲ್ಲಿ ಅಂತರ ವಿಶ್ವವಿದ್ಯಾಲಯ-ದಕ್ಷಿಣ ಭಾರತ ವಲಯವನ್ನು ಪ್ರತಿನಿಧಿಸಲಿದ್ದು, ಈ ಮೂಲಕ ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ದೈಹಿಕ ಶಿಕ್ಷಕರು, ಸಿಬ್ಬಂದಿ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ./University blue