ಬೆಂಗಳೂರು (Bengaluru) : ೨೦೦೦ನೇ ದಶಕದ ಆರಂಭದಲ್ಲಿ ಪ್ರಶಸ್ತಿ-ಪುರಸ್ಕೃತ ಅಮ್ಯೂಸ್‌ಮೆಂಟ್‌ ಪಾರ್ಕ್‌ ಅನ್ನು ಯಶಸ್ವಿಯಾಗಿ ನಿರ್ಮಿಸಿದ್ದ ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ (Sammys Dreamland) ಸಂಸ್ಥೆಯು, ಇದೀಗ ಬೆಂಗಳೂರಿನಲ್ಲಿ ಅತ್ಯಾಧುನಿಕ ಮತ್ತು ವೈಭೋಗಯುತ ವಸತಿ ಸಮುದಾಯವನ್ನು ರೂಪಿಸುತ್ತಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರ ಹೃದಯಭಾಗದ ನಡುವೆ ಅತ್ಯುತ್ತಮವಾದ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಈ ಉನ್ನತ ಮಟ್ಟದ ನಿವಾಸಗಳಿಗಾಗಿ ಎಂಬೆಸಿ ಬೊಲೆವಾರ್ಡ್, ಗೋದ್ರೇಜ್, ಅಸೆಟ್ಜ್, ಪೂರ್ವಂಕರ ಮುಂತಾದ ಪ್ರತಿಷ್ಠಿತ ಬೃಹತ್ ನಿರ್ಮಾಣ ಪಾಲುದಾರರೊಂದಿಗೆ ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ ಕೈಜೋಡಿಸಿದೆ. ಅಂತರಾಷ್ಟ್ರೀಯ ಹಾಗೂ ಅಮೇರಿಕಾದ ವಾಸ್ತುಶಿಲ್ಪ ಶೈಲಿಯಲ್ಲಿ ವಿನ್ಯಾಸಗೊಂಡಿರುವ ಈ ಯೋಜನೆಯು ಅಭೂತಪೂರ್ವ ಯಶಸ್ಸನ್ನು ಕಂಡಿದ್ದು, ಪ್ರಸ್ತುತ ಅತ್ಯಂತ ಬೇಡಿಕೆಯಲ್ಲಿದೆ. ನೋಂದಣಿಗಾಗಿ ಈಗ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ : alcohol addiction/ ಭಟ್ಕಳದಲ್ಲಿ ಸಾರಾಯಿ ಚಟಕ್ಕೆ ಇಬ್ಬರ ಸಾವು

ಸೃಜನಶೀಲತೆ ಮತ್ತು ಶ್ರೇಷ್ಠತೆಯ ಸಂಭ್ರಮದ ದ್ಯೋತಕವಾಗಿ, ಸ್ಯಾಮಿಸ್ ಡ್ರೀಮ್‌ಲ್ಯಾಂಡ್ (Sammys Dreamland) ತನ್ನ ಎರಡು ಹೆಗ್ಗುರುತಿನ ವಸತಿ ಯೋಜನೆಗಳಾದ – ನೇಚರ್ಸ್ ಬೊಲೆವಾರ್ಡ್ ಮತ್ತು ಸನ್‌ರೈಸ್ ಬೊಲೆವಾರ್ಡ್ – ಇವುಗಳನ್ನು ನಿನ್ನೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಚಾನೆಲ್ ಪಾಲುದಾರರ ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮಾವೇಶದಲ್ಲಿ ಹೆಮ್ಮೆಯಿಂದ ಲೋಕಾರ್ಪಣೆಗೊಳಿಸಿತು.

ಇದನ್ನೂ ಓದಿ : power outage/ ಮೇ ೨೪ರಂದು ವಿದ್ಯುತ್‌ ವ್ಯತ್ಯಯ

ಈ ಭವ್ಯ ಸಮಾರಂಭವು ದೂರದೃಷ್ಟಿ, ಸಂಸ್ಕೃತಿ ಮತ್ತು ಸಮುದಾಯದ ಚೈತನ್ಯವನ್ನು ಮೇಳೈಸಿದ್ದು, ಈ ಸಂದರ್ಭಕ್ಕೆ ನಾಲ್ವರು ವಿಶಿಷ್ಟ ವ್ಯಕ್ತಿಗಳು ಆಗಮಿಸಿ ತಮ್ಮ ಉಪಸ್ಥಿತಿಯಿಂದ ಮೆರುಗು ನೀಡಿದರು. ಮಿಸ್ ಗ್ಲೋಬಲ್ ಇಂಡಿಯಾ ೨೦೨೪ರ ಸ್ವೀಝಲ್ ಫರ್ಟಾಡೊ,  ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಇಂದ್ರಜಿತ್ ಲಂಕೇಶ, ವಾಸ್ತುಶಿಲ್ಪಿ ಹಾಗೂ ಝೆರೋಧಾ ಸಂಸ್ಥಾಪಕರಾದ ನಿತಿನ್ ಮತ್ತು  ನಿಖಿಲ್ ಕಾಮತ್ ಅವರ ಮಾತೃಶ್ರೀ ರೇವತಿ ಎಸ್. ಕಾಮತ, ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ನ ಅಧ್ಯಕ್ಷ, ನಿರ್ಮಾಪಕ ಸ್ಯಾಮಿ ನನ್ವಾನಿ ಉಪಸ್ಥಿತರಿದ್ದರು.

ಇದನ್ನೂ ಓದಿ : rain update/ ಭಟ್ಕಳದ ಬೆಳಕೆಯಲ್ಲಿ ದಾಖಲೆ ಮಳೆ !

ಈ ಅವಳಿ ಯೋಜನೆಗಳ ಅನಾವರಣವು, ಆಧುನಿಕ ಹಾಗೂ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಕೂಡಿದ ಜೀವನಶೈಲಿಯನ್ನು ಪುನರ್‌ ವ್ಯಾಖ್ಯಾನಿಸುವ ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ನ ಪಯಣದಲ್ಲಿ ಒಂದು ಮಹತ್ವಪೂರ್ಣ ಮೈಲಿಗಲ್ಲು. ನೇಚರ್ಸ್ ಬೊಲೆವಾರ್ಡ್ ಮತ್ತು ಸನ್‌ರೈಸ್ ಬೊಲೆವಾರ್ಡ್ ಎರಡೂ ಯೋಜನೆಗಳು, ಅತ್ಯಂತ ಚಿಂತನಶೀಲವಾಗಿ ವಿನ್ಯಾಸಗೊಳಿಸಲಾದ, ಪರಿಸರ ಪ್ರಜ್ಞೆಯುಳ್ಳ ಮತ್ತು ಉನ್ನತ ಜೀವನಶೈಲಿ ಹಾಗೂ ಸ್ವಾಸ್ಥ್ಯವನ್ನು ಆಧರಿಸಿದ ನೆಲೆಗಳನ್ನು ನಿರ್ಮಿಸುವಲ್ಲಿ ಸಂಸ್ಥೆಯು ಹೊಂದಿರುವ ಅಚಲವಾದ ಬದ್ಧತೆಯನ್ನು ಪ್ರತಿಫಲಿಸುತ್ತವೆ.

ಇದನ್ನೂ ಓದಿ : job interview/ ಭಟ್ಕಳದಲ್ಲಿ ಮೆಗಾ ಉದ್ಯೋಗ ಸಂದರ್ಶನ

ಈ ಯೋಜನೆಗಳ ಹಿಂದಿನ ದಾರ್ಶನಿಕರಾದ  ಸ್ಯಾಮಿ ನನ್ವಾನಿ ಅವರು, ಸಮುದಾಯ-ಕೇಂದ್ರಿತ ನಗರ ವಿಕಾಸದ ಕುರಿತಾದ ತಮ್ಮ ದೀರ್ಘಕಾಲೀನ ಮುನ್ನೋಟವನ್ನು ಸಭಿಕರೊಂದಿಗೆ ಹಂಚಿಕೊಂಡರು. “ನೇಚರ್ಸ್ ಬೊಲೆವಾರ್ಡ್ ಮತ್ತು ಸನ್‌ರೈಸ್ ಬೊಲೆವಾರ್ಡ್‌ಗಳ ಮೂಲಕ, ನಾವು ಕೇವಲ ಗೃಹಗಳನ್ನು ನಿರ್ಮಿಸುತ್ತಿಲ್ಲ – ಬದಲಾಗಿ, ಪ್ರಕೃತಿ ಮತ್ತು ಆಧುನಿಕತೆಗಳು ಸುಲಲಿತವಾಗಿ ಒಂದಾಗುವ ಸಾಮರಸ್ಯದ ತಾಣಗಳನ್ನು ನಾವು ಸೃಷ್ಟಿಸುತ್ತಿದ್ದೇವೆ” ಎಂದು ಅವರು ನುಡಿದರು.

ಇದನ್ನೂ ಓದಿ : police raid/ ಪೊಲೀಸರನ್ನು ನೋಡಿ ಪರಾರಿಯಾದರು !

ಈ ಲೋಕಾರ್ಪಣಾ ಸಮಾರಂಭವು ಉದ್ಯಮದ ಅಗ್ರಗಣ್ಯರು, ಚಾನೆಲ್ ಪಾಲುದಾರರು, ಮಾಧ್ಯಮ ಬಂಧುಗಳು ಮತ್ತು ಅತಿಥಿಗಳಿಂದ ಅಭೂತಪೂರ್ವ ಹಾಗೂ ಉತ್ಸಾಹಪೂರ್ಣ ಪ್ರತಿಕ್ರಿಯೆಗೆ ಸಾಕ್ಷಿಯಾಯಿತು. ಈ ಯೋಜನೆಗಳ ಅನನ್ಯತೆಯನ್ನು ಸಾರುವ ಬೃಹತ್ ನಕ್ಷೆಗಳು (ಮಾಸ್ಟರ್ ಪ್ಲಾನ್‌ಗಳು) ಮತ್ತು ವಿಶಿಷ್ಟ ಸೌಲಭ್ಯಗಳ ವಿಶೇಷ ಪೂರ್ವಾವಲೋಕನವನ್ನು ಅವರಿಗೆ ಕಲ್ಪಿಸಲಾಯಿತು.

ಇದನ್ನೂ ಓದಿ : power shutdown / ಭಟ್ಕಳ ಸಹಿತ ೩ ತಾಲೂಕುಗಳಲ್ಲಿ ವಿದ್ಯುತ್‌ ಇರಲ್ಲ