ಭಟ್ಕಳ (Bhatkal): ಕಟ್ಟಡ ನಿರ್ಮಾಣಕ್ಕೆ ಮರಳು ಇಲ್ಲದೆ (sand scarcity), ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜೀವನ ಅಸ್ತವ್ಯಸ್ತವಾಗಿರುವ ಕುರಿತು ಭಟ್ಕಳ ಸೆಂಟ್ರಿಂಗ್ ಕಾರ್ಮಿಕರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗೆ, ಸಹಾಯಕ ಆಯುಕ್ತರಿಗೆ ಹಾಗೂ ತಹಶೀಲ್ದಾರರಿಗೆ ಪ್ರತ್ಯೇಕವಾಗಿ ಮನವಿಯನ್ನು ಸಲ್ಲಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಮರಳು ಸಿಗದೆ ಇರುವ ಕುರಿತು ಹಾಗೂ ಇದರಿಂದ ಕಾರ್ಮಿಕರ ಜೀವನದ ಮೇಲೆ ಆಗುವ ಪರಿಣಾಮದ ಕುರಿತು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ತಾಲೂಕಿನಲ್ಲಿ ಹಲವು ತಿಂಗಳುಗಳಿಂದ ಮರಳು ಸಿಗದೇ ಕಟ್ಟಡ ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಈ ಕೆಲಸವನ್ನೇ ನಂಬಿಕೊಂಡಿರುವ ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಅಕ್ಟೋಬರ್ ೧೫ರಂದು ವಿವಿಧೆಡೆ ಅಡಿಕೆ ಧಾರಣೆ
ನಮ್ಮ ಈ ಉತ್ತರ ಕನ್ನಡ (Uttara Kannada) ಹಳ್ಳ, ಕೊಳ್ಳ, ತೊರೆ, ಹೊಳೆ ಮತ್ತು ನದಿಗಳಿರುವ ಅತೀ ಸುಂದರ ಭೂಸ್ವರ್ಗ. ಇಂತಹ ಭೂಸ್ವರ್ಗದಲ್ಲಿ ಪ್ರಕೃತಿ ಸಹಜವಾಗೇ ಕೆಲ ಸಾಂಪ್ರದಾಯಿಕ ಕಸುಬುಗಳನ್ನು ಸೃಷ್ಟಿಸಿದೆ. ಅದರಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಯೂ ಒಂದು. ಮನುಷ್ಯ ಜೀವನದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮರಳು ಅತ್ಯಮೂಲ್ಯ ವಸ್ತುವಾಗಿದೆ. ಮರಳಿಲ್ಲದೆ ಯಾವ ನಿರ್ಮಾಣ ಕಾರ್ಯವೂ ಸಾಧ್ಯವಿಲ್ಲ ಎನ್ನುವುಷ್ಟರ ಮಟ್ಟಿಗೆ “ಮರಳು” ಮನುಷ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಆದರೆ ಈಗ ಸರ್ಕಾರ ಮತ್ತು ಸ್ಥಳೀಯಾಡಳಿತದ ಅವೈಜ್ಞಾನಿಕ ನೀತಿ-ನಿಯಮದಿಂದಾಗಿ ಸಾಂಪ್ರದಾಯಿಕ ಮರಳುಗಾರಿಕೆಯನ್ನು ತಡೆಹಿಡಿಯಲಾಗಿದೆ. ಇದರಿಂದ ಗುತ್ತಿಗೆದಾರರು, ಸೆಂಟ್ರಿಂಗ್ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕಲ್ಲು ಕಟ್ಟುವವರು, ಗಿಲಾಯಿ ಮಾಡುವವರು ಮತ್ತು ಇತರೆ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ವಿಶ್ವ ಸಂಸ್ಥೆಯ ಸಮ್ಮೇಳನಕ್ಕೆ ಸಾಗರದ ಕುವರ
ಮರಳಿಲ್ಲದೇ ನಮ್ಮ ಭಟ್ಕಳ ತಾಲೂಕಿನಲ್ಲೇ ಅದೆಷ್ಟೋ ಕಟ್ಟಡಗಳ ಕಾಮಗಾರಿಗಳು ಸ್ಥಗಿತವಾಗಿದೆ. ಹೀಗೆಯೇ ಮುಂದುವರೆದರೆ ಕಟ್ಟಡ ನಿರ್ಮಾಣವನ್ನೇ ಜೀವನ ನಿರ್ವಹಣೆಯ ಕಾಯಕವನ್ನಾಗಿಸಿಕೊಂಡಿರುವವರ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಗಂಭೀರವಾಗಲಿದೆ. ಈ ಸಮಸ್ಯೆಯನ್ನು ಒಂದು ವಾರದ ಒಳಗಾಗಿ ಬಗೆಹರಿಸಿಕೊಡಬೇಕು. ಇದಕ್ಕೆ ಪರಿಹಾರ ಸಿಗದೇ ಹೋದರೆ ತಾಲೂಕಿನ ಎಲ್ಲಾ ಕಾರ್ಮಿಕರ ಸಂಘಟನೆಗಳು ಒಗ್ಗೂಡಿ ಬೃಹತ್ ಹೋರಾಟ ಕೈಗೊಳ್ಳುವುದಾಗಿ ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : Bhatkal Bandh/ ಆಟೋ, ಮೀನು ಮಾರುಕಟ್ಟೆಗಿಲ್ಲ ಬಂದ್ ಬಿಸಿ
ಈ ಸಂದರ್ಭದಲ್ಲಿ ಭಟ್ಕಳ ಸೆಂಟ್ರಿಂಗ್ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ ನಾಯ್ಕ, ಉಪಾಧ್ಯಕ್ಷ ತಿಮ್ಮಯ್ಯ ನಾಯ್ಕ, ಸುಬ್ರಾಯ ನಾಯ್ಕ, ಕಾರ್ಯದರ್ಶಿಗಳಾದ ಶಿವರಾಮ ಹೊನ್ನೆಗದ್ದೆ, ರಾಮ ಹೆಬಳೆ, ಖಜಾಂಚಿ ಬಾಬು ನಾಯ್ಕ, ಸದಸ್ಯರಾದ ಗಣಪತಿ ನಾಯ್ಕ, ವಸಂತ ಗೊಂಡ, ಗಣಪತಿ ಗೊಂಡ, ಸುರೇಶ ನಾಯ್ಕ, ಉಮೇಶ ದೇವಡಿಗ, ಮಂಜುನಾಥ ನಾಯ್ಕ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ನರಸಿಂಹಾನಂದ ಸ್ವಾಮೀಜಿ ಬಂಧನಕ್ಕೆ ತಂಜೀಮ್ ಆಗ್ರಹ