ಭಟ್ಕಳ: ತಾಲೂಕಿನ ಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಗ್ಗದ್ದೆಯಲ್ಲಿ ಭಾರಿ ಮಳೆಯಿಂದಾಗಿ ಸರಕಾರಿ ಪ್ರಾಥಮಿಕ ಶಾಲೆ ಕುಸಿದು ಬಿದ್ದಿದೆ (school collapse).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಭಟ್ಕಳ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಮಂಗಳವಾರದಿಂದ ಶಾಲೆ ಪುನಾರಂಭಗೊಂಡಿದೆ. ಮಳೆಯ ರಜೆಯಲ್ಲಿದ್ದ ಸಂದರ್ಭದಲ್ಲಿ ಶಾಲೆ ಕುಸಿತ (school collapse) ಕಂಡಿದೆ. ಹೀಗಾಗಿ ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ : ಉರುಳಿದ ಶಾಲಾ ಬಸ್; ವಿದ್ಯಾರ್ಥಿಗಳಿಗೆ ಗಾಯ

ಇದೀಗ ಪುನರಾರಂಭಗೊಂಡ ಶಾಲೆಯ ಮಕ್ಕಳಿಗೆ ಅದೇ ಊರಿನ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ ಸುಕ್ರ ಗೊಂಡ ನೆರವಿಗೆ ಬಂದಿದ್ದಾರೆ. ಅವರ ಮನೆಯ ಮಹಡಿಯಲ್ಲಿ ಪಾಠ ಆರಂಭವಾಗಿದೆ. ಬಿಸಿಯೂಟದ ತಯಾರಿಯೂ ಮನೆಯಲ್ಲಿಯೇ ನಡೆಯುತ್ತಿದೆ. ಬಿಇಓ ವಿ.ಡಿ ಮೊಗೇರ ಸ್ಥಳಕ್ಕೆ ತೆರಳಿ ಮಕ್ಕಳ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ : ಬನವಾಸಿ ನೆರೆ ಪೀಡಿತ ಪ್ರದೇಶಗಳಿಗೆ ಬಿಜೆಪಿ ತಂಡ ಭೇಟಿ

೧೯೭೨ರಲ್ಲಿ ಹೆಗ್ಗದ್ದೆಯಲ್ಲಿ ಶಾಲೆ ನಿರ್ಮಾಣವಾಗಿತ್ತು. ಈ ಶಾಲೆಯ ಮೊದಲ ಬ್ಯಾಚ್ ವಿದ್ಯಾರ್ಥಿಯಾಗಿದ್ದೇನೆ. ನನ್ನ ಹೆಂಡತಿ, ಮಗ, ಮಗಳು ಎಲ್ಲರೂ ಶಿಕ್ಷಣ ಪಡೆದು ಸರಕಾರಿ ಉದ್ಯೋಗದಲ್ಲಿದ್ದಾರೆ. ನನಗೆ ನನ್ನೂರ ಮಕ್ಕಳ ಬಗ್ಗೆ ಕಾಳಜಿ ಇದೆ. ಅದಕ್ಕಾಗಿ ಇಲ್ಲಿಯೇ ಸ್ಥಳಾವಕಾಶ ಮಾಡಿಕೊಟ್ಟಿದ್ದೇನೆ. ಪರ್ಯಾಯ ವ್ಯವಸ್ಥೆಯಾಗುವವರೆಗೂ ಮಕ್ಕಳು ಇಲ್ಲಿಯೇ ಓದಿಕೊಳ್ಳಲಿ ಎನ್ನುತ್ತಾರೆ ಸುಕ್ರಗೊಂಡ.

ಇದನ್ನೂ ಓದಿ : ಸಿಎಸ್‌ಇಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಕಳೆದ ಗುರುವಾರ ಮತ್ತು ಶುಕ್ರವಾರ ಜೋರು ಮಳೆಯಾಗಿತ್ತು. ಸಂಜೆಯ ವೇಳೆ ಮಳೆ ಇನ್ನಷ್ಟು ಜೋರಾಗಿತ್ತು. ಮಳೆಯ ಅಬ್ಬರದಲ್ಲಿ ಶಾಲೆಗೆ ರಜೆ ಕೊಟ್ಟಿದ್ದು ಒಳ್ಳೆಯದೇ ಆಗಿತ್ತು. ಗೋಡೆ ಕುಸಿದು ಬಿದ್ದಿದೆ.

ಇದನ್ನೂ ಓದಿ : ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಸೇತುವೆ ಮುಳುಗಡೆ

ಈ ಮಕ್ಕಳು ಬೇರೆ ಶಾಲೆಗೆ ಹೋಗಬೇಕು ಎಂದರೆ ಗುಡ್ಡ ಬೆಟ್ಟಗಳ ಹಾದಿಯಲ್ಲಿ ಸರಿಸುಮಾರು ೫ ಕಿಮೀ ದೂರ ನಡೆದುಕೊಂಡು ಹೋಗಬೇಕು. ಅದಕ್ಕಾಗಿ ಊರ ನಡುವೆ ಇರುವ ಸುಕ್ರಗೊಂಡರ ಮನೆಯ ಮಹಡಿಯಲ್ಲಿ ಮಂಗಳವಾರದಿಂದ ಶಾಲೆ ಆರಂಭಿಸಲು ಒಪ್ಪಿದ್ದೇವೆ. ಆದರೆ ಸರಕಾರಿ ಶಾಲೆ ನಿರ್ಮಾಣಕ್ಕೆ ಸೂಕ್ತ ನಿವೇಶನವನ್ನು ಒದಗಿಸಿ ಶಾಲೆ ನಿರ್ಮಾಣಕ್ಕೆ ತ್ವರಿತ ಕ್ರಮ ಜರುಗಿಸಬೇಕು ಎನ್ನುತ್ತಾರೆ ಪಾಲಕರು.