ಭಟ್ಕಳ (Bhatkal): ಇಲ್ಲಿನ ಕ್ವಾಲಿಟಿ ಹೋಟಲ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಶಾಲಾ ವಾಹನ ಅಪಘಾತವಾಗಿರುವ (School Van Accident) ಘಟನೆ ಸೋಮವಾರ ಮಾ.೩ರಂದು ಮಧ್ಯಾಹ್ನ ವೇಳೆಗೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಅಂಜುಮನ್‌ (Anjuman) ಪ್ರೈಮರಿ ಉರ್ದು ಸ್ಕೂಲ್ ಗೆ (Urdu School) ಸೇರಿದ ವಾಹನ ಇದಾಗಿದೆ. ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ಬರುವ ವೇಳೆ ಈ ಘಟನೆ (School Van Accident) ನಡೆಡಿದೆ. ವಾಹನದಲ್ಲಿ ಶಾಲಾ ವಿದ್ಯಾರ್ಥಿಗಳು ಇಲ್ಲದೆ ಇರುವುದರಿಂದಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ. ಅಪಘಾತದಲ್ಲಿ ಶಾಲಾ ವಾಹನ ಚಾಲಕ ಹಾಗೂ ನಿರ್ವಾಹಕಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಇದನ್ನೂ ಓದಿ : Yakshagana/ ಭಟ್ಕಳದಲ್ಲಿ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ

ಶಾಲಾ ವಾಹನ ಸಂಶುದ್ದೀನ್‌ ವೃತ್ತದ ಕಡೆಗೆ ಹೋಗುತ್ತಿದ್ದಾಗ ಮಂಗಳೂರು (Mangaluru) ಕಡೆಗೆ ಹೊರಟಿದ್ದ ಲಾರಿ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಸಹಿತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಪಘಾತದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : young woman died/ ಬೈಕಿನಿಂದ ಬಿದ್ದು ಯುವತಿ ದುರ್ಮರಣ