ಧಾರವಾಡ (Dharwad) : ಉತ್ತರ ಕರ್ನಾಟಕದ (Uttara Karnataka) ಅತ್ಯಾಧುನಿಕ ಹೃದಯ ಆರೈಕೆ (heart treatment) ಕೇಂದ್ರವಾದ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ (SDM Narayan Heart Centre) ಅಪರೂಪದ ಸಾಧನೆ ಮಾಡಿದೆ. ಹೃದಯದ ಆರೈಕೆಗೆ ಹೆಸರುವಾಸಿಯಾದ ಈ ಕೇಂದ್ರ ಕಳೆದ ವರ್ಷ ವ್ಯಾಸ್ಕ್ಯೂಲರ್ ಚಿಕಿತ್ಸಾ (vascular treatment) ವಿಭಾಗ ಪ್ರಾರಂಭಿಸಿತ್ತು. ಇದು ಆರಂಭವಾದ ಕೇವಲ ಒಂದು ವರ್ಷದ ಅವಧಿಯಲ್ಲಿಯೇ ೨೫೦ಕ್ಕೂ ಹೆಚ್ಚು ಯಶಸ್ವಿ ಚಿಕಿತ್ಸೆಗಳನ್ನು ನಡೆಸಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಉತ್ತರ ಕರ್ನಾಟಕದಲ್ಲಿ ವ್ಯಾಸ್ಕ್ಯೂಲರ್ ಚಿಕಿತ್ಸಕರು ವಿರಳ, ಬೆರಳಣಿಕೆಯಷ್ಟು ತಜ್ಞ ವೈದ್ಯರು ಮಾತ್ರ ಇಲ್ಲಿ ಲಭ್ಯ. ಇಂತಹ ಸಂದರ್ಭದಲ್ಲಿ ನಾರಾಯಣ ಹಾರ್ಟ್ ಸೆಂಟರ್ ಇದಕ್ಕಾಗಿಯೇ ಒಂದು ವಿಶೇಷ ವಿಭಾಗ ಆರಂಭಿಸಿದೆ. ವ್ಯಾಸ್ಕ್ಯೂಲರ್ ಅಥವಾ ರಕ್ತನಾಳಿಯ ರೋಗಗಳಿಗೆ ಸಂಬಂಧಿಸಿದಂತೆ ಇಲ್ಲಿಯ ಜನರು ದೂರದ ಊರುಗಳಿಗೆ ಅಲೆದಾಡುವುದನ್ನು ತಪ್ಪಿಸುವಂತೆ ಮಾಡಿದೆ. ಈ ವಿಭಾಗವು ಸುಮಾರು ೨೫೦ಕ್ಕೂ ಅಧಿಕ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ಒದಗಿಸಿ ಸಾಧನೆ ಮಾಡಿದೆ. ವ್ಯಾಸ್ಕ್ಯೂಲರ್ ಚಿಕಿತ್ಸಕರ ಕೊರತೆಯಿರುವ ಈ ಪ್ರದೇಶದಲ್ಲಿ, ಆಸ್ಪತ್ರೆಯು ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನು ನೀಡುವ ತನ್ನ ಬದ್ದತೆಯನ್ನು ಈ ಸಾಧನೆ ಮೂಲಕ ಎತ್ತಿ ಹಿಡಿದಿದೆ.
ಇದನ್ನೂ ಓದಿ : NSUI/ ಉತ್ತರ ಕನ್ನಡ ಜಿಲ್ಲೆಗೆ ವಿದ್ಯಾರ್ಥಿ ನ್ಯಾಯ ಯಾತ್ರೆ
ವ್ಯಾಸ್ಕೂಲರ್ ಮತ್ತು ಎಂಡೋವ್ಯಾಸ್ಕ್ಯೂಲರ್ ತಜ್ಞ ಡಾ. ಬಸವರಾಜೇಂದ್ರ ಆನೂರ್ ಶೆಟ್ರು ನೇತೃತ್ವದಲ್ಲಿ ಈ ವಿಭಾಗವು ತೆರೆದ ಶಸ್ತ್ರಚಿಕಿತ್ಸೆಗಳು ಮತ್ತು ಕ್ಯಾಥ್ ಲ್ಯಾಬ್ ನಲ್ಲಿನ ಎಂಡೋವ್ಯಾಸ್ಕ್ಯೂಲರ್ ಚಿಕಿತ್ಸೆಗಳೆರಡರಲ್ಲೂ ಅತ್ಯಾಧುನಿಕ ಚಿಕಿತ್ಸೆಗಳನ್ನು ನೀಡುತ್ತಿದೆ. ಇದರಿಂದಾಗಿ ರೋಗಿಗಳು ದೂರದ ಊರುಗಳಿಗೆ ಪ್ರಯಾಣಿಸುವ ಅಗತ್ಯವಿಲ್ಲದೆ ಸುಧಾರಿತ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗಿದೆ. ” ನಮ್ಮ ಗುರಿ ರೋಗಿಗಳಿಗೆ ತಮ್ಮ ಊರಿನಲ್ಲೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಲಭ್ಯವಾಗುವಂತೆ ಮಾಡುವುದು” ಎಂದು ಡಾ. ಬಸವರಾಜೇಂದ್ರ ಅವರು ಹೇಳಿದರು.
ಇದನ್ನೂ ಓದಿ : Chariot Festival/ಚನ್ನಪಟ್ಟಣ ಹನುಮಂತ ದೇವರ ರಥೋತ್ಸವ ಸಂಪನ್ನ
ಅತ್ಯಾಧುನಿಕ ಲೇಸರ್ ಅಬ್ಲೇಶನ್ ನೊಂದಿಗೆ ವ್ಯಾಸ್ಕ್ಯೂಲರ್ ಆರೈಕೆ : ಆಸ್ಪತ್ರೆಯ ಮುಕುಟಕ್ಕೆ ಇನ್ನೊಂದು ಗರಿ ಎನ್ನುವಂತೆ ವ್ಯಾಸ್ಕ್ಯೂಲರ್ ಚಿಕಿತ್ಸೆಗಾಗಿ (vascular treatment) ಅತ್ಯಾಧುನಿಕ ಎಂಡೋವೆನಸ್ ಲೇಸರ್ ಥೇರಪಿ (EVLT) ಯನ್ನು ಪರಿಚಯಿಸಿದೆ. ಇದು ವ್ಯಾಸ್ಕ್ಯೂಲರ್ ಆರೈಕೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. EVLT ಸಾಂಪ್ರದಾಯಿಕ ರಕ್ತನಾಳದ ಶಸ್ತ್ರಚಿಕಿತ್ಸೆಗಿಂತ ಕನಿಷ್ಠಗಾಯದ ಚಿಕಿತ್ಸೆ (Minimal invasive) ಆಯ್ಕೆಯಾಗಿದೆ. ಇದರ ವೈಶಿಷ್ಟ್ಯವೆನೆಂದರೆ ರೋಗಿಯೂ ಶೀಘ್ರ ಚೇತರಿಕೆ ಆಗುವದಲ್ಲದೆ, ಕಡಿಮೆ ನೋವು ಮತ್ತು ಉತ್ತಮ ರಕ್ತ ಪರಿಚಲನೆಯನ್ನು ಈ ಚಿಕಿತ್ಸೆ ನೀಡುತ್ತದೆ. ವಿಶೇಷವೆನೆಂದರೆ ಈ ವಿಭಾಗವು ಪ್ರಾರಂಭವಾದ ಒಂದು ವರ್ಷದ ಅವಧಿಯಲ್ಲಿ ೧೦೦ಕ್ಕೂ ಹೆಚ್ಚು ಲೇಸರ್ ಥೇರಪಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.
ಇದನ್ನೂ ಓದಿ : NSUI/ ಉತ್ತರ ಕನ್ನಡ ಜಿಲ್ಲೆಗೆ ವಿದ್ಯಾರ್ಥಿ ನ್ಯಾಯ ಯಾತ್ರೆ
ಅತಿ ಶೀಘ್ರದಲ್ಲಿ ಮಧುಮೇಹ ಪಾದ ಚಿಕಿತ್ಸಾಲಯ ಆರಂಭ : ಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ತನ್ನ ಹೊಸ ಮಧುಮೇಹ ಪಾದ ಚಿಕಿತ್ಸಾಲಯವನ್ನು ಪ್ರಾರಂಭಿಸುತ್ತಿದೆ. ಇದು ಮಧುಮೇಹದಿಂದ (diabetes) ಪಾದಗಳಲ್ಲಿ ಉಂಟಾಗುವ ಸಮಸ್ಯೆಗಳ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗಾಗಿ ಮೀಸಲಾದ ಸೌಲಭ್ಯವಾಗಿದೆ. ಈ ಚಿಕಿತ್ಸಾಲಯವು ಅತಿ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ. “ಗ್ಯಾಂಗ್ರಿನ್ ನಿಂದಾಗಿ ಕಾಲು ಕತ್ತರಿಸುವಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಆರಂಭಿಕ ಹಂತದಲ್ಲಿಯೇ ಇದನ್ನು ಪತ್ತೆ ಹಚ್ಚಲು ಮತ್ತು ವಿಶೇಷ ಆರೈಕೆಯನ್ನು ಒದಗಿಸಲು ಈ ನಮ್ಮ ಹೊಸ ಸೇವೆಯ ಗುರಿಯಾಗಿದೆ” ಎಂದು ಡಾ. ಬಸವರಾಜೇಂದ್ರ ಹೇಳಿದರು.
ಇದನ್ನೂ ಓದಿ : Chariot Festival/ಚನ್ನಪಟ್ಟಣ ಹನುಮಂತ ದೇವರ ರಥೋತ್ಸವ ಸಂಪನ್ನ
ಪತ್ರಿಕಾ ಗೋಷ್ಠಿಯಲ್ಲಿ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ನ ವ್ಯವಸ್ಥಾಪಕ ನಿರ್ದೇಶಕರಾದ ಶಶಿಕುಮಾರ ಪಟ್ಟಣಶೆಟ್ಟಿ, ಸೀನಿಯರ್ ಮಾರ್ಕೆಟಿಂಗ್ ಮ್ಯಾನೇಜರ್ ಅಜೇಯ ಹುಲಮನಿ, ಡೆಪ್ಯೂಟಿ ಮ್ಯಾನೇಜರ್ ದುಂಡೇಶ ತಡಕೋಡ ಹಾಗೂ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ : WEEKLY SPECIAL TRAIN/ ವಾರದ ವಿಶೇಷ ರೈಲು ಸಂಚಾರ