ಭಟ್ಕಳ (Bhatkal) : ೨೦೨೩ರ ಫೆ. ೨೩ರಂದು ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಇಬ್ಬರು ಆರೋಪಿಗಳಲ್ಲಿ ಓರ್ವಗೆ ಮರಣದಂಡನೆ ಹಾಗೂ ಇನ್ನೋರ್ವ ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ಕಾರವಾರದ ಉತ್ತರ ಕನ್ನಡ (Uttara Kannada) ಜಿಲ್ಲಾ ನ್ಯಾಯಾಲಯ (District Court) ವಿಧಿಸಿದೆ (Sentence announced).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹಾಡುವಳ್ಳಿಯ ಹಲ್ಯಾಣಿಯ ಶ್ರೀಧರ ಭಟ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದರೆ, ಅವರ ಮಗ ವಿನಯ ಭಟ್ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ (Sentence announced). ಹಾಡುವಳ್ಳಿಯ ಶಂಭು ಭಟ್(೬೫), ಅಪರ ಪತ್ನಿ ಮಾದೇವಿ ಭಟ್(೬೦), ಮಗ ರಾಘವೇಂದ್ರ (ರಾಜು) ಭಟ್ (೩೪) ಮತ್ತು ಸೊಸೆ ಕುಸುಮಾ ಭಟ್(೩೦) ಎಂಬುವವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಅದೃಷ್ಟವಶಾತ್ ರಾಘವೇಂದ್ರ ಭಟ್ ಹಾಗೂ ಕುಸುಮಾ ದಂಪತಿಯ ಇಬ್ಬರು ಮಕ್ಕಳು ಬಚಾವ್ ಆಗಿದ್ದರು.
ಇದನ್ನೂ ಓದಿ : Auto Hit/ ಆಟೋ ಡಿಕ್ಕಿಯಾಗಿ ಹೆದ್ದಾರಿ ಪಕ್ಕ ನಿಂತಿದ್ದವ ಸಾವು
ಈ ಪ್ರಕರಣದ ಬಗ್ಗೆ ಮೃತ ಶಂಭು ಭಟ್ ಮಗಳು ಜಯಾ ಅಡಿಗ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂವರನ್ನು ವಶಕ್ಕೆ ಪಡೆದು, ಇಬ್ಬರನ್ನು ತನಿಖೆಗೆ ಒಳಪಡಿಸಿದ್ದರು. ಆಗಿನ ಗ್ರಾಮೀಣ ಠಾಣೆ ಸಿಪಿಐ ಚಂದನ ಪ್ರಕರಣದ ತನಿಖಾಧಿಕಾರಿಯಾಗಿ ಪ್ರಕರಣದ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸಿದ್ದರು. ಇಬ್ಬರೂ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆದು ಇಬ್ಬರೂ ಅಪರಾಧ ಎಸಗಿರುವುದು ದೃಢಪಟ್ಟಿತ್ತು. ಈ ಪ್ರಕರಣದಲ್ಲಿ ತಂದೆ-ಮಗ ದೋಷಿ ಎಂದು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿತ್ತು. ಇದೀಗ ಶಿಕ್ಷೆ ಪ್ರಮಾಣ ಪ್ರಕಟಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ : Judgement/ ತಂದೆ-ಮಗ ದೋಷಿ ಎಂದು ತೀರ್ಪಿತ್ತ ನ್ಯಾಯಾಲಯ