ಭಟ್ಕಳ (Bhatkal): ಪಟ್ಟಣದ ರಾಷ್ಟ್ರೀಯ ಹೆದ್ದಾರಿ (National Highway) ೬೬ರಲ್ಲಿ ಕ್ವಾಲಿಟಿ ಹೋಟೆಲ್ ಬಳಿ ಟೆಂಪೋವೊಂದು ನಿಯಂತ್ರಣ ತಪ್ಪಿ ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ (serial accident).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಧರಣಿ ಅಪಘಾತ ಪರಿಣಾಮ ಗಂಭೀರವಾಗಿ ಗಾಯಗೊಂಡ ಓರ್ವ ಸಾವನ್ನಪ್ಪಿದರೆ, ನಾಲ್ವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರು ಗಂಭೀರ ಸ್ಥಿತಿಯಲ್ಲಿದ್ದು, ಕುಂದಾಪುರ (Kundapur) ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ : Police raid/ ಜಾನುವಾರು ಮಾಂಸ ಕಡಿಯುತ್ತಿದ್ದ ಮೂವರ ಬಂಧನ
ಭಟ್ಕಳ ತಾಲೂಕಿನ ಹೆಬಳೆಯ ಗಾಂಧಿ ನಗರದ ನಿವಾಸಿ ಯೋಗೀಶ್ ನಾಗಪ್ಪ ನಾಯ್ಕ (೨೯) ಮೃತ ದುರ್ದೈವಿ. ಟೆಂಪೋ ಮೊದಲಿಗೆ ಯೋಗೇಶ್‌ಗೆ ಬಡಿದಿದೆ. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ನಂತರ ವಿದ್ಯುತ್ ಬಿಲ್ ಪಾವತಿಸಲು ತೆರಳುತ್ತಿದ್ದ ಬೆಳಕೆಯ ಮಹೇಶ ಮೊಗೇರ ಮತ್ತು ಶೇಖರ ಮೊಗೇರ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಶಿರೂರು ಮೂಲದ ಮುಜ್ದಲಿಫಾ ಸ್ಕೂಟರಿಗೆ ಬಡಿದಿದೆ. ಹನೀಫಾಬಾದ್ ನಿವಾಸಿ ನಯೀಮ್ ಕಮ್ರಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನು ಓದಿ : GSB/ ಜಿ.ಎಸ್.ಬಿ. ಕಲ್ಯಾಣ ಸೇವಾ ಸಮಿತಿ ವಾರ್ಷಿಕೋತ್ಸವ
ಭಟ್ಕಳ ತಾಲೂಕಿನ ಕಾಯ್ಕಿಣಿ ತೆರ್ನಮಕ್ಕಿ ನಿವಾಸಿ ಗಣೇಶ ಎಂಬವರು ಇತ್ತೀಚೆಗೆ ಖಾಸಗಿ ಶಾಲೆಯಿಂದ ಸೆಕೆಂಡ್ ಹ್ಯಾಂಡ್ ಟೆಂಪೋ ಖರೀದಿಸಿದ್ದರು. ಅದನ್ನು ಬದಲಾಯಿಸಲು ಬೈಂದೂರಿಗೆ (byndoor) ಕೊಂಡೊಯ್ಯುತ್ತಿದ್ದರು.
ಇದನ್ನು ಓದಿ : cow protection/ ಭಟ್ಕಳದಲ್ಲಿನ ಗೋ ಹತ್ಯಾ ಪ್ರಕರಣ ಬಿಚ್ಚಿಟ್ಟ ಹಿಂಜಾವೇ
ಭಟ್ಕಳದ ಕ್ವಾಲಿಟಿ ಹೊಟೇಲ್ ಬಳಿ ತಲುಪಿದಾಗ ಟೆಂಪೋದ ಸ್ಟೇರಿಂಗ್ ಲಾಕ್ ಆದ ಕಾರಣ ವಾಹನ ಬಲಕ್ಕೆ ಪಲ್ಟಿಯಾಗಿ ಎದುರುಗಡೆಯಿಂದ ಬರುತ್ತಿದ್ದ ಮೋಟಾರ್ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ (serial accident). ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ (complaint) ದಾಖಲಾಗಿದೆ.
ಇದನ್ನು ಓದಿ : Follow up/ ನಡೆದಿದ್ದೇನು ಗೊತ್ತಾ? ಸತ್ತವರು ಯಾರು? ಉಳಿದವರ ಕಥೆ ಏನು?