ಹೊಸನಗರ : ಅದೇನು ಕೌಟುಂಬಿಕ ಸಮಸ್ಯೆ ಎದುರಾಗಿತ್ತೋ ಏನೋ. ಆ ಮಹಾ ತಾಯಿ, ತನ್ನ ಇಬ್ಬರು ಕಂದಮ್ಮಗಳ ಜೊತೆ ಪ್ರಾಣ ಕಳೆದುಕೊಂಡಿದ್ದಾಳೆ. ಇನ್ನು ಸರಿಯಾಗಿ ಪ್ರಪಂಚವೇ ನೋಡದ ಚಿಣ್ಣರು, ಬಾರದ ಲೋಕಕ್ಕೆ ಪಯಣಸಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ (shade of yarn) ಆವರಿಸಿದೆ. ಪುಟ್ಟ ಕಂದಮ್ಮಗಳ ಸಾವು, ಕರುಳು ಕಿವುಚುವಂತಾಗಿದೆ. ಪ್ರಪಂಚದ ಅರಿವೇ ಇಲ್ಲದ ಮಕ್ಕಳ ಅಗಲಿಕೆಗೆ ಇಡೀ ಗ್ರಾಮ ಕಂಬನಿ ಮಿಡಿಯುವಂತಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿಯ ಮತ್ತಿಕೈ ಗ್ರಾಮದಲ್ಲಿಯೇ ಇಂತಹದೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ತನ್ನೆರೆಡು ಮಕ್ಕಳೊಂದಿಗೆ ತಾಯಿ ವಾಣಿ (32) ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾಳೆ. ಮಕ್ಕಳಾದ ಸಮರ್ಥ (12), ಸಂಪದ (6) ಮೃತರಾದ ದುರ್ದೈವಿಗಳಾಗಿದ್ದಾರೆ. ಮತ್ತಿಕೈ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಇದನ್ನೂ ಓದಿ :
ಇಲ್ಲಿನ ಚಂಪಕಾಪುರ ವಾಸಿ ರಾಜೇಶ್ ಎಂಬುವವರ ಪತ್ನಿ ವಾಣಿ ಆತ್ಮಹತ್ಯೆ ನಿರ್ಧಾರಕ್ಕೆ ಕಾರಣ ತಿಳಿದು ಬಂದಿಲ್ಲ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದರೂ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ರಾಜೇಶ್ ಪಕ್ಕದ ಮನೆಯ ಬಾವಿಗೆ ಹಾರಿರುವ ವಾಣಿ, ಮಾನಸಿಕ ಖಿನ್ನತೆ, ಕುಟುಂಬ ನಿರ್ವಹಣೆಯ ಒತ್ತಡದಿಂದ ಬಳಲುತ್ತಿದ್ದರೆಂದು ಹೇಳಲಾಗಿದೆ. ಸದ್ಯ ಮೃತ ದೇಹಗಳನ್ನು ಬಾವಿಯಿಂದ ಮೇಲಕ್ಕೆ ಎತ್ತಲಾಗಿದ್ದು, ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಗರ ಠಾಣೆ ಪೊಲ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಡೀ ಗ್ರಾಮದಲ್ಲಿ ಸೂತಕದ ಛಾಯೆ (shade of yarn) ಆವರಿಸಿದೆ.
ಇದನ್ನೂ ಓದಿ :