ಭಟ್ಕಳ (Bhatkal): ತಾಲೂಕಿನ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಶಾರದಾ ಪೂಜೆ (Sharada pooja) ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಾಲೆಯಲ್ಲಿ ದಿನ ನಿತ್ಯ ಶಿಕ್ಷಕರು ಹೇಳುವ ಪಾಠ ಕೇಳಿಕೊಂಡು ಇರುತ್ತಿದ್ದ ವಿದ್ಯಾರ್ಥಿಗಳು ಶಾರದಾ ಪೂಜೆ (Sharada pooja) ನಿಮಿತ್ತ ಭಜನೆ ಹೇಳುವ ಮೂಲಕ ಸಂತಸಪಟ್ಟರು. ಅರ್ಚಕ ರಾಮಕೃಷ್ಣ ಭಟ್ ಶಾರದಾ ಪೂಜೆ ನೆರವೇರಿಸಿದರು. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂದು ಪ್ರಾರ್ಥನೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ದೇವಿದಾಸ ನಾಯ್ಕ ,ಉಪಾಧ್ಯಕ್ಷೆ ಮಮತಾ ದೇವಾಡಿಗ, ಸದಸ್ಯೆ ಸುಮನಾಬಾಯಿ ಹಾಗೂ ಶಾಲಾ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.
ಇದನ್ನೂ ಓದಿ : Landslide/ ಪತ್ತೆ ಕಾರ್ಯಾಚರಣೆ ಮುಂದುವರಿಸಲು ಒತ್ತಾಯ