ಭಟ್ಕಳ(Bhatkal): ಶರಾವತಿಯ (Sharavathi) ಒಡಲನ್ನು ಅಗೆದು-ಬಗೆದು-ಸೀಳಿ ಪಶ್ಚಿಮಘಟ್ಟದಲ್ಲಿ ಇನ್ನೊಂದು ದುರಂತಕ್ಕೆ ಎಂದೂ ಎಡೆಮಾಡಿಕೊಡೆವು. ಹಾಗೇನಾದರು ಸರ್ಕಾರ ಮುಂದಾದರೆ ನ್ಯಾಯಾಲಯದ ಮೆಟ್ಟಲೇರಲೂ ಸಿದ್ಧ ಎಂದು ಮಾಜಿ ಸಚಿವ, ಬಿ.ಜೆ.ಪಿ. ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ(H Halappa) ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಸೋಮವಾರ ಭಟ್ಕಳ ಬಿ.ಜೆ.ಪಿ. ಮಂಡಲ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶರಾವತಿ ನೀರನ್ನು ೨೮೦೦ ಅಡಿ ಎತ್ತರದ ಹಾಗೂ ಸುಮಾರು ೪೮೦ ಕಿ.ಮಿ. ದೂರದ ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆ ಕಾರ್ಯಸಾಧುವಲ್ಲ. ಬದಲಿಗೆ ಕೇವಲ ೬೦ ಕಿ.ಮೀ. ದೂರದಲ್ಲಿನ ಮೇಕೆದಾಟು ಯೋಜನೆಯೇ ಕಾರ್ಯಸಾಧುವಾಗಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಸುಮಾರು ೨೨ ಸಾವಿರ ಕೋಟಿಯ ಯೋಜನೆಯನ್ನು ಹಾಕಿಕೊಂಡಿರುವುದರಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು.
ಇದನ್ನೂ ಓದಿ : ಪಿಎಸೈ ಯಲ್ಲಪ್ಪ ಅಮಾನತು – “ಭಟ್ಕಳ ಡೈರಿ” ವರದಿ ಫಲಶ್ರುತಿ
ಶರಾವತಿ ನೀರನ್ನು ಬೆಂಗಳೂರಿಗೆ (Bengaluru) ತೆಗೆದುಕೊಂಡು ಹೋಗುವ ಪ್ರಸ್ತಾಪನೆಯ ಕುರಿತು ಬಿ.ಜೆ.ಪಿ. (BJP) ಹಾಗೂ ನಾಗರಿಕರ ತೀವ್ರ ವಿರೋಧವಿದೆ. ಶೀಘ್ರದಲ್ಲಿಯೇ ಸಭೆ ಸೇರಿ ಪ್ರತಿಭಟನೆಯ ರೂಪರೇಷೆಗಳನ್ನು ನಿರ್ಧರಿಸಲಾಗುವುದು. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ವಿರೋಧ ಮಾಡುವ ಕುರಿತು ನಾವು ಚರ್ಚೆ ಮಾಡಿದ್ದೇವೆ ಎಂದು ಹರತಾಳು ಹಾಲಪ್ಪ (H Halappa) ಹೇಳಿದರು.
ಇದನ್ನೂ ಓದಿ : ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ
ಈಗಾಗಲೇ ಪಶ್ಚಿಮಘಟ್ಟ (Western Ghat) ಪ್ರದೇಶದಲ್ಲಿ ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ನೂರಾರು ಕಿ.ಮೀ.ಗಟ್ಟಲೆ ಹತ್ತಾರು ಅಡಿಗಳ ಆಳಕ್ಕೆ ಅಗೆದು ಪೈಪ್ ಹಾಕುವ ಪ್ರಕ್ರಿಯೆಯಲ್ಲಿ ನೂರಾರು ದೈತ್ಯ ಲಾರಿಗಳು, ಯಂತ್ರಗಳು ಓಡಾಡಿ ಸಂಪೂರ್ಣ ಶಿಥಿಲವಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ೪೫೦ ಕಿ.ಮೀ. ದೂರಕ್ಕೆ ಪೈಪ್‌ಲೈನ್ ಅಳವಡಿಸುವಲ್ಲಿ ಗಿರಿ, ಶಿಖರ, ಗುಡ್ಡ, ಮರಗಳನ್ನು ಅಗೆದು ಪೈಪ್ ಲೈನ್ ಅಳವಡಿಕೆ ಮಾಡಬೇಕಾಗುತ್ತದೆ. ಅಲ್ಲದೇ ಶರಾವತಿಯಿಂದ ೩೦-೪೦ ಟಿ.ಎಂ.ಸಿ. ನೀರನ್ನು ಎತ್ತಿ ಬೆಂಗಳೂರಿಗೆ ತೆಗೆದುಕೊಂಡು ಹೋದರೆ ಹೊಳೆಯಲ್ಲಿ ಉಪ್ಪು ನೀರು ನುಗ್ಗಿ ನದಿ ಪಾತ್ರದಲ್ಲಿರುವ ಸಾವಿರಾರು ಎಕರೆ ಜಮೀನು ನಿಷ್ಪçಯೋಜಕವಾಗುತ್ತವೆ ಎಂದರು.
ಇದನ್ನೂ ಓದಿ : ಕಾರಿಗೆ ಬೈಕ್ ಡಿಕ್ಕಿ; ಕಾರು ಚಾಲಕನ ವಿರುದ್ಧ ದೂರು
ಮಾಜಿ ಶಾಸಕ ಸುನೀಲ ನಾಯ್ಕ, ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಬಿ.ಜೆ.ಪಿ. ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಹೊನ್ನಾವರದ ರಾಜು ಭಂಡಾರಿ, ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ಪ್ರಮುಖರಾದ ಕೇದಾರ ಕೊಲ್ಲೆ, ಶ್ರೀನಿವಾಸ ನಾಯ್ಕ, ಉಮೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಗೆಳೆಯನ ಮನೆಗೆ ಹೋದವ ಎದೆನೋವಿನಿಂದ ಸಾವು