ಕುಮಟಾ : ಕನ್ನಡದ ಸೂಪರ್‌ಸ್ಟಾರ್ (Kannada Superstar) ಶಿವರಾಜಕುಮಾರ (Shivarajkumar) ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ (Kumta) ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ (Tourist Place) ಯಾಣಕ್ಕೆ (Yana) ಭೇಟಿ ನೀಡಿದ್ದಾರೆ. ಕನ್ನಡದ ಕ್ಲಾಸಿಕ್‌ ಚಲನಚಿತ್ರ (Classic Film)  ‘ನಮ್ಮೂರ ಮಂದಾರ ಹೂವೆ’ (Nammoora Mandara Hoove) ಚಿತ್ರೀಕರಣದ ನಂತರ ಸುಮಾರು ೨೯ ವರ್ಷಗಳ ನಂತರ ಮತ್ತೆ ಭೇಟಿ ನೀಡಿದರು. ತಮ್ಮ ಭೇಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು ಕರ್ನಾಟಕದ (Karnataka) ತಮ್ಮ ನೆಚ್ಚಿನ ಸ್ಥಳದ ಬಗ್ಗೆ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಯಾಣ ಕ್ಷೇತ್ರಕ್ಕೆ ಭೇಟಿ ನೀಡಿರುವುದನ್ನು ಕನ್ನಡದ ನಟ (Kannada Actor) ಶಿವರಾಜಕುಮಾರ (Shivarajkumar) ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು X ನಲ್ಲಿನ ಅವರ ಪೋಸ್ಟ್‌ ಸಾಕಷ್ಟು ವೈರಲ್‌ ಆಗಿದೆ. ‘ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ..’ ನಮ್ಮೂರ ಮಂದಾರ ಹೂವೆ ನಂತರ ಮತ್ತೆ ನನ್ನ ಯಾಣ ಭೇಟಿ ೨೯ ವರ್ಷಗಳ ಬಳಿಕ ಎಂದು ಫೋಟೋ ಸಹಿತ ಬರೆದುಕೊಂಡಿದ್ದಾರೆ. ಅವರ ಯಾಣ ಭೇಟಿಯು ೧೯೯೬ರಲ್ಲಿ ಬಿಡುಗಡೆಯಾದ ನಮ್ಮೂರ ಮಂದಾರ ಹೂವೆ ಚಿತ್ರದ ಬಗೆಗಿನ ಹಳೆಯ ನೆನಪುಗಳನ್ನು ತಂದಿದೆ.

ವಿಡಿಯೋ ಸಹಿತ ಇದನ್ನೂ ಓದಿ : Urban Bank/ ಬಿಜೆಪಿ ಮುಖಂಡಗೆ ಭರ್ಜರಿ ಜಯ

ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಯಶಸ್ವಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ನಂತರ ಶಿವಣ್ಣ ಇತ್ತೀಚೆಗೆ ಯುಎಸ್‌ನ ಫ್ಲೋರಿಡಾದಿಂದ ಮರಳಿದರು. ಸುಣ್ಣದ ಕಲ್ಲಿನ ರಚನೆಗಳು ಮತ್ತು ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ಯಾಣದ ರಮಣೀಯ ಶಿಲಾ ಶಿಖರಗಳನ್ನು ವೀಕ್ಷಿಸಿದ ತಮ್ಮ ನೆಚ್ಚಿನ ನಟ ಬಗ್ಗೆ ಶಿವಣ್ಣ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Urban Bank/ ಭಟ್ಕಳ ಅರ್ಬನ್‌ ಬ್ಯಾಂಕ್‌ ಚುನಾವಣೆಯಲ್ಲಿ ಗೆದ್ದವರು ಯಾರ್ಯಾರು?

ತಮ್ಮ ಭೇಟಿಯ ಸಂದರ್ಭದಲ್ಲಿ, ಕರ್ನಾಟಕದ ಭೂದೃಶ್ಯಗಳ ಸೌಂದರ್ಯವನ್ನು ಪ್ರದರ್ಶಿಸುವ ನಮ್ಮೂರ ಮಂದಾರ ಹೂವೆ ಚಿತ್ರದ ತಯಾರಿಕೆಯ ಸಮಯದಲ್ಲಿ ಯಾಣದಲ್ಲಿ ಕಳೆದ ಸಮಯವನ್ನು ಶಿವಣ್ಣ ನೆನಪಿಸಿಕೊಂಡಿದ್ದಾರೆ. ಸೈಟ್‌ನಲ್ಲಿ ಅವರ ಉಪಸ್ಥಿತಿಯು ಅಭಿಮಾನಿಗಳು ಮತ್ತು ಸ್ಥಳೀಯರಲ್ಲಿ ಉತ್ಸಾಹವನ್ನು ಹುಟ್ಟುಹಾಕಿತ್ತು.  ಅವರು ಈ ಪ್ರದೇಶದಲ್ಲಿ ಚಿತ್ರೀಕರಿಸಿದ ಚಲನಚಿತ್ರದ ಮೋಡಿಮಾಡುವ ಹಾಡುಗಳು ಮತ್ತು ದೃಶ್ಯಗಳ ನೆನಪುಗಳನ್ನು ತಮ್ಮ ಜೊತೆ ಇದ್ದ ಪತ್ನಿ ಗೀತಾ ಅವರೊಂದಿಗೆ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ : Private bus/ ಅಪಘಾತದಲ್ಲಿ ೯ ಜನರು ಗಂಭೀರ

ನಮ್ಮೂರ ಮಂದಾರ ಹೂವೆ ಕನ್ನಡದ ಹೆಸರಾಂತ ನಿರ್ದೇಶಕ ಸುನೀಲ ಕುಮಾರ ದೇಸಾಯಿ (Sunilkumar Desai) ನಿರ್ದೇಶನದ ಚಿತ್ರ. ಈ ಚಿತ್ರವು ಹ್ಯಾಟ್ರಿಕ್‌ ಹೀರೋ (Hatric Hero) ಶಿವರಾಜಕುಮಾರ, ರಮೇಶ ಅರವಿಂದ (Ramesh Aravind) ಮತ್ತು ಪ್ರೇಮಾ (Prema) ಅಭಿನಯದ ಕನ್ನಡ ಚಲನಚಿತ್ರೋದ್ಯಮದ ಕ್ಲಾಸಿಕ್ ರೋಮ್ಯಾಂಟಿಕ್ ಚಿತ್ರಗಳಲ್ಲಿ ಒಂದಾಗಿದೆ. ಅದ್ಭುತ ಯಶಸ್ಸಿನ ಹೊರತಾಗಿ, ಇಳಯರಾಜರ (Ilayaraja) ಸಂಗೀತ ಸಂಯೋಜನೆಯ ಚಲನಚಿತ್ರವು ಸಂಗೀತ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಶ್ವಿಯಾಗಿದೆ. ಕನ್ನಡ ಈ ಸುಪರ್ ಡುಪರ್‌ ಚಿತ್ರವನ್ನು ತಮಿಳಿನ ಕಂಗಳಿನ್ ವಾರತೈಗಲ್ (Kangalin Vaarthaigal) ಎಂಬ ಚಿತ್ರಕ್ಕೆ ರಿಮೇಕ್‌ ಮಾಡಲಾಗಿತ್ತು.

ಇದನ್ನೂ ಓದಿ : Microfinance/ ಜೀವನ ಅಂತ್ಯಕ್ಕೆ ಮುಂದಾದ ಮೈಕ್ರೋಫೈನಾನ್ಸ್‌ ಸಿಬ್ಬಂದಿ