ಭಟ್ಕಳ (Bhatkal): ತಾಲೂಕಿನ ಹಸರವಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಧಂತಿ (Vardhanti) ಉತ್ಸವವು ಏಪ್ರಿಲ್ ೯ ಮತ್ತು ೧೦ರಂದು ನಡೆಯಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವರ್ಧಂತಿ (Vardhanti) ಉತ್ಸವ ನಿಮಿತ್ತ ಏ.೯ ರಂದು ಸಂಜೆ ೫.೩೦ರಿಂದ ಶ್ರೀ ದೇವರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೇರವೇರಲಿವೆ. ಬಳಿಕ ರಂಗಪೂಜೆ ನಡೆಯುತ್ತದೆ. ಏ. ೧೦ರಂದು ಬೆಳಿಗ್ಗೆ ೯ ಗಂಟೆಗೆ ದೇವತಾ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ. ೧೦.೧೨ ಗಂಟೆಗೆ ಧಾರ್ಮಿಕ ಪೂಜಾ ಸೇವೆಗಳು ನಡೆಯಲಿವೆ. ಮಧ್ಯಾಹ್ನ ೧೨.೩೦ ಕ್ಕೆ ಮಹಾಪೂಜೆ. ೧ ರಿಂದ ೩.ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೭ಕ್ಕೆ ಮಹಾಪೂಜೆ ಹಾಗೂ ೭.೩೦ ರಿಂದ ೯ ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೧೦ ಗಂಟೆಗೆ ಕುಂದಾಪುರ ತಾಲೂಕಿನ ಹಳ್ಳಾಡಿಯ ಕಲಾಚಿಗುರು ತಂಡದಿಂದ ಚೇತನ ನೈಲಾಡಿ ನಿರ್ದೇಶನದಲ್ಲಿ “ನಾಳಿಗ್ ಹೇಳಿ” ಕುಂದ ಕನ್ನಡ ಕುತೂಹಲ ಭರಿತ ಹಾಸ್ಯ ನಗೆ ನಾಟಕ ಪ್ರದರ್ಶನಗೊಳ್ಳಲಿದೆ.
ಇದನ್ನೂ ಓದಿ : Bike crashes/ ಹೂವಿನ ಅಂಗಡಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು