ಸಿದ್ದಾಪುರ (Siddapur) : ಅಪ್ಪ-ಮಗ ತೋಟವೊಂದರ ಮೂಲಕ ಮನೆಗೆ ಬರುತ್ತಿರುವಾಗ ವ್ಯಕ್ತಿಯೋರ್ವ ಕತ್ತಿ ಝಳಪಿಸಿ ಮಾರಣಾಂತಿಕ ಹಲ್ಲೆ ನಡೆಸಲು ಮುಂದಾದ ಘಟನೆ ಸಿದ್ದಾಪುರ ತಾಲೂಕಿನ ಬಿದ್ರಕಾನ ಚಟ್ನಳ್ಳಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸ್ಥಳೀಯ ಉಮಾಪತಿ ಮಾಬ್ಲೇಶ್ವರ ಭಟ್ಟ ಆರೋಪಿತರು. ಇವರ ವಿರುದ್ಧ ಅದೇ ಊರಿನ ಚಂದ್ರಶೇಖರ ರಾಮ ಭಟ್ಟ (೭೨) ದೂರು ದಾಖಲಿಸಿದ್ದಾರೆ. ಪಿರ್ಯಾದಿ ತಮ್ಮ ಮಗ ಪ್ರಶಾಂತ ಜೊತೆ ತಮ್ಮ ಜಮೀನಿನಲ್ಲಿ ಅಡಿಕೆ ಸಸಿ ನೆಡುವ ಕೆಲಸ ಮಾಡುತ್ತಿದ್ದರು. ನಂತರ ಬೆಟ್ಟದಿಂದ ಹುಲ್ಲು ಕೊಯ್ಲು ತರುವ ಸಂದರ್ಭದಲ್ಲಿ ಜೋರಾಗಿ ಮಳೆ ಬಂದಿತ್ತು. ಹಳ್ಳ ತುಂಬಿ ದಾಟುವ ಸಂಕ ತೇಲಿ ಹೋಗಿತ್ತು. ಇದರಿಂದ ಅವರು ತೋಟವೊಂದರ ಮೂಲಕ ಮನೆಗೆ ಬರುತ್ತಿರುವ ಆರೋಪಿ ಉಮಾಪತಿ ಅಡ್ಡಗಟ್ಟಿದ್ದಾರೆ.

ಇದನ್ನೂ ಓದಿ :  ಬೈಕ್‌ಗೆ ಹಿಂಬದಿಯಿಂದ ಇನ್ನೊಂದು ಬೈಕ್‌ ಡಿಕ್ಕಿ

ಇಲ್ಲಿ ಓಟಾಟ ಮಾಡಬಾರದೆಂದು ಹೇಳಿ, ಕತ್ತಿ ಹಿಡಿದು ಮಾರಣಾಂತಿಕ ಹಲ್ಲೆ ನಡೆಸಲು ಮುಂದಾದರು. ಪಿರ್ಯಾದಿ ಮಗ ಕತ್ತಿಯನ್ನು ಹಿಡಿದು ಎಸೆಯಲು ಯತ್ನಿಸಿದಾಗ, ಪಿರ್ಯಾದಿಯನ್ನು ದೂಡಿದ ಆರೋಪಿ  ಪಿರ್ಯಾದಿಯನ್ನು ದೂಡಿದ್ದಲ್ಲದೆ, ಬಲಕೈಯನ್ನು ಹಿಡಿದು ಬಾಯಿಂದ ಕಚ್ಚಿ ಗಾಯಪಡಿಸಿದ್ದಾನೆ. ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮನ್ನು ಮುಗಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಸಿದ್ದಾಪುರ (Siddapur) ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :ಚಾಲಕನ ನಿಯಂತ್ರಣ ತಪ್ಪಿ ಗಾರ್ಡನ್‌ಗೆ ನುಗ್ಗಿದ ಕಾರು