ಶಿರಸಿ (Sirsi Crime) : ಅಂದರ್-ಬಾಹರ್ ಇಸ್ಪೀಟ್ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಶಿರಸಿಯ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ (Case Registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಸ್ತೂರಬಾ ನಗರದ ಸಮೀರಖಾನ್ ಇಬ್ರಾಹಿಂ ಖಾನ್ (೪೬), ಬಸವೇಶ್ವರ ನಗರದ ಬ್ಲೇಜ್ ಅಲೆಗ್ಜಾಂಡರ್ ವಾಜ್ (೫೬), ರಾಜೀವ ನಗರದ ಅಲ್ತಾಫ್ ಇಬ್ರಾಹಿಂ ಖಾನ್(೨೩), ಕಸ್ತೂರಬಾ ನಗರದ ಮೊಹಮ್ಮದ ಕಾಸೀಂ ನೂರ್ ಅಹ್ಮದ್ ತಿಮ್ಮಾಪೂರ (೩೪) ಮತ್ತು ನೆಹರು ನಗರದ ಮೊಹಮ್ಮದ ಶಫೀ ಅಬ್ದುಲ್ ಅಜೀಜ್ (೨೯) ಆರೋಪಿಗಳು. ಇವರು ನಿನ್ನೆ ಸೆ.೨೯ರಂದು ಸಂಜೆ ೭ ಗಂಟೆಗೆ ನಗರದ ಹುಸರಿಗೆ ಹೋಗುವ ಮುಖ್ಯ ರಸ್ತೆಯ ಪಕ್ಕದಲ್ಲಿರುವ ವಕಾರಿ ಬೇಣದಲ್ಲಿ ಅಂದರ್ ಬಾಹರ್ ಆಡುತ್ತಿದ್ದರು.
ಇದನ್ನೂ ಓದಿ : ಗತಿಗೆಟ್ಟ ಸರ್ಕಾರಕ್ಕೆ ಧಿಕ್ಕಾರ ಎಂದ ಪ್ರತಿಭಟನಾಕಾರರು
ಪೊಲೀಸರು ದಾಳಿ ನಡೆಸಿದಾಗ ಆರೋಪಿತರ ಪೈಕಿ ಸಮೀರಖಾನ್ ಮತ್ತು ಮೊಹಮ್ಮದ್ ಕಾಸೀಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸ್ಥಳದಲ್ಲಿ ೩೨೫೦ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ರತ್ನಾ ಸಂಕಪ್ಪ ಕುರಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ (Sirsi Crime).
ಇದನ್ನೂ ಓದಿ : ಮನೆಯಲ್ಲಿ ಒಬ್ಬರೇ ಇದ್ದ ಪ್ರಾಂಶುಪಾಲರ ಸಾವಿನಲ್ಲಿ ಶಂಕೆ