ಕಾರವಾರ (Karwar) : ಬೈಕ್ ಸವಾರನ (bike rider) ಬಳಿ ಲಂಚ ಸ್ವೀಕರಿಸುತಿದ್ದ ಶಿರಸಿ (Sirsi) ಹೊಸ ಮಾರುಕಟ್ಟೆ ಠಾಣೆ ಹೆಡ್ ಕಾನಸ್ಟೇಬಲ್ ಚಂದ್ರಶೇಕರ ರವರನ್ನು ಅಮಾನತು ಮಾಡಿ (Havaldar suspend) ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣರವರು ಆದೇಶಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಯಲ್ಲಾಪುರ (Yellapur) ನಾಕಾದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿ ಇದ್ದಾಗ ಬೈಕ್ ನಿಲ್ಲಿಸಿ ಅವರಿಂದ ಹಣ ಪಡೆದುಕೊಂಡಿರುವ ವಿಡಿಯೋ (viral video) ಸಾಮಾಜಿಕ ಜಾಲತಾಣದಲ್ಲಿ (social media) ಹರಿದಾಡುತ್ತಿದೆ. ಇದಲ್ಲದೆ ಬಾಡಿ ಕ್ಯಾಮರಾ ವನ್ನು (body camera) ಧರಿಸದೇ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬಂದಿದೆ. ಇದನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಚಂದ್ರಶೇಖರ ಅವರ ಮೇಲೆ ಇಲಾಖೆ ವಿಚಾರಣೆ ಬಾಕಿ ಇರಿಸಿ ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಿದ್ದಾರೆ (Havaldar suspend). ಈ ಕುರಿತು ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಹವಾಲ್ದಾರ ಲಂಚ ಸ್ವೀಕರಿಸುತ್ತಿದ್ದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : Appeal / ಸಮರ್ಪಕ ಪಾರ್ಕಿಂಗ್‌ಗಾಗಿ ಮನವಿ