ಭಟ್ಕಳ (Bhatkal) : ನಗರದ ಸ್ನೇಹ ವಿಶೇಷ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರದ ನಿರ್ವಹಣಾ ವೆಚ್ಚವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (SKDRP grant) ಮೂಲಕ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು (Veerendra Heggade)  ೭೫ ಸಾ.ರೂ. ಮಂಜೂರು ಮಾಡಿದ್ದಾರೆ. ಇದರ ಆದೇಶಪತ್ರವನ್ನು ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟರವರು ಶಾಲೆಯ ಮುಖ್ಯಸ್ಥೆ ಮಾಲತಿ ಉದ್ಯಾವರ ಅವರಿಗೆ ಹಸ್ತಾಂತರಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಂತರ ಮಾತನಾಡಿದ ರಾಧಾಕೃಷ್ಣ ಭಟ್ಟ, ಸಮಾಜದಲ್ಲಿ ವಿಶೇಷ ಚೇತನ ಶಾಲೆಗಳಿಗೆ ಸಹಾಯವನ್ನು ನೀಡಿದರೆ ದೇವಸ್ಥಾನಕ್ಕೆ ಮತ್ತು ಸಮಾಜದ ಉತ್ತಮ ಕಾರ್ಯಕ್ಕೆ ನೀಡಿದಂತೆ. ಹಣ ಉಳ್ಳವರು, ದಾನ ಮಾಡುವಂತಹ ಮನಸ್ಥಿತಿ ಉಳ್ಳವರು ಇಂಥಹ ವಿಶೇಷ ಚೇತನ ಶಾಲೆಗಳಿಗೆ ಸಹಾಯವನ್ನು ನೀಡಬೇಕು. ವಿಶೇಷ ಚೇತನ ಮಕ್ಕಳು ಮನೆಗಳಲ್ಲಿ ಪಾಲಕರ ನಿರ್ಲಕ್ಷ್ಯಕ್ಕೆ ಒಳಗಾಗಿ ಜೀವನವನ್ನು ಸಾಗಿಸುವಂತಹ ಪರಿಸ್ಥಿತಿ ಇರುತ್ತದೆ. ಅಂತಹ ಮಕ್ಕಳನ್ನು ಈ ಶಾಲೆಗೆ ಕರೆತಂದು ದಿನನಿತ್ಯ ಅವರನ್ನು ನೋಡಿಕೊಳ್ಳುವುದಲ್ಲದೇ ಅವರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಈ ಶಾಲೆಯಿಂದ ಸಾಮಾನ್ಯ ಜ್ಞಾನವನ್ನು ನೀಡಿದ್ದಾರೆ ಇದು ಮಕ್ಕಳಿಗೆ ಇನ್ನೊಂದು ಬಾಳು ನೀಡಿದಂತೆ ಎಂದರು.

ಇದನ್ನೂ ಓದಿ : ರಾಮಚಂದ್ರಾಪುರ ಮಠ- ಗೋಕರ್ಣ ದೇಗುಲ ಒಂದೇ ನಾಣ್ಯದ ಎರಡು ಮುಖಗಳು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಣೇಶ ನಾಯ್ಕ, ಶಾಲೆಯ ಮುಖ್ಯಸ್ಥೆ ಮಾಲತಿ ಉದ್ಯಾವರ ಮಾತನಾಡಿದರು. ಅನುದಾನ (SKDRP grant) ಮಂಜೂರು ಆಗಿರುವ ಆದೇಶಪತ್ರವನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪ್ರತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಕಾರ್ಯದರ್ಶಿ ಮನಮೋಹನ ನಾಯ್ಕ, ಯೋಜನೆಯ ಮೇಲ್ವಿಚಾರಕ ಕೇಶವ, ಪತ್ರಕರ್ತ ನಸಿಮುಲ್ಲಾ ಘನಿ, ಈಶ್ವರ ನಾಯ್ಕ, ಲೋಕೇಶ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ವಿಡಿಯೋ ಸಹಿತ ಇದನ್ನೂ ಓದಿ : human chain/ ಮಳೆಯಲ್ಲೇ ನಿಂತ ಶಾಲಾ ಮಕ್ಕಳು