ಭಟ್ಕಳ: ಅತ್ಯುನ್ನತ ಪರೀಕ್ಷೆಯಾದ ಸಿ ಎ (ಚಾರ್ಟರ್ಡ್ ಅಕೌಂಟ್) ಪರೀಕ್ಷೆಯಲ್ಲಿ (CA exam) ಭಟ್ಕಳ (Bhatkal) ತಾಲೂಕಿನ ಹಡೀನ ಗ್ರಾಮದ ಸೋಡಿಗದ್ದೆಯ ಮೇಘನಾ ಮಹಾದೇವ ನಾಯ್ಕ ಉತ್ತೀರ್ಣಗೊಂಡು ತಾಲೂಕಿಗೆ ಗೌರವ ತಂದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸೋಡಿಗದ್ದೆಯ ಮಹಾದೇವ ನಾಯ್ಕ ಹಾಗೂ ಗೀತಾ ನಾಯ್ಕ ದಂಪತಿ ಮಗಳಾದ ಇವರು ಬಡತನದಲ್ಲಿಯೇ ಕಷ್ಟಪಟ್ಟು ಓದಿ ಈ ಸಾಧನೆ ಮಾಡಿದ್ದಾರೆ. ಇವರ ತಂದೆ ಅಟೋ ಚಾಲಕರಾಗಿದ್ದು, ತಾಯಿ ಆಶಾ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸೋಡಿಗದ್ದೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತು ನಂತರ ೬ನೇ ತರಗತಿಯಿಂದ ೧೦ರವರೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಎಸ್ಎಸ್ಎಲ್ಸಿಯಲ್ಲಿ ೯೫% ಅಂಕ ಪಡೆದು, ನಂತರ ಕಾರ್ಕಳದ (Karkala) ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿಯಲ್ಲಿ ೯೬% ಅಂಕ ಪಡೆದು ಸಾಧನೆಗೈದಿದ್ದಾರೆ. ನಂತರ ಉಡುಪಿಯ (Udupi) ತ್ರಿಶಾ ಕಾಲೇಜಿನಲ್ಲಿ ಡಿಗ್ರಿ ಮುಗಿಸಿ ಜನವರಿ ೨೦೨೬ರ ಸಿಎ ಪರೀಕ್ಷೆಯಲ್ಲಿ (CA exam) ತೇರ್ಗಡೆ ಹೊಂದಿದ್ದಾರೆ.

bus overturn/ ಬಸ್ ಪಲ್ಟಿಯಲ್ಲಿ ಭಟ್ಕಳದ ಐವರು ಸಹಿತ ೨೦ಕ್ಕೂ ಹೆಚ್ಚು ಜನರಿಗೆ ಗಾಯ: ಗಾಯಾಳುಗಳ ವಿವರ ಇಲ್ಲಿದೆ…