ಭಟ್ಕಳ : ಸಾಲ ತುಂಬಲು ಹೇಳಿದ್ದಕ್ಕೆ ಮಗನಿಂದಲೇ ತಂದೆ ಹಲ್ಲೆ (Attack) ಗೊಳಗಾಗಿರುವ ಬಗ್ಗೆ ಭಟ್ಕಳ (Bhatkal) ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ(Case Registerd).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್‌ ಪೇಜ್‌ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ತಾಲೂಕಿನ ಬೆಳ್ನಿಯ ದೊಡ್ಡಯ್ಯನಮನೆಯ ಮಂಜಪ್ಪ ಕೃಷ್ಣ ಮೊಗೇರ(೬೫) ಹಲ್ಲೆಗೊಳಗಾದವರು. ಇವರ ಮಗ ರಮೇಶ(೩೭) ತಮ್ಮ ಮೇಲೆ ಹಲ್ಲೆ (Attack) ಮಾಡಿರುವುದಾಗಿ ಸ್ವತಃ ತಂದೆ ಮಂಜಪ್ಪ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಶಿಕ್ಷಕರಿಗೊಂದು ಶುಭ ಸುದ್ದಿ

ದೂರಿನಲ್ಲೇನಿದೆ?
ಮಗ ರಮೇಶ ಅವರ ಮದುವೆಗೆ ತಂದೆ ಕೃಷ್ಣಮೊಗೇರ ತಮ್ಮ ಜಮೀನು ಇಟ್ಟು ತಮ್ಮ ಹೆಂಡತಿಯ ಹೆಸರಿನಲ್ಲಿ ೫ ಲಕ್ಷ ರೂ. ಸಾಲ ಮಾಡಿದ್ದರು. ಮದುವೆಯ ಮುಂಚೆ ಈ ಸಾಲವನ್ನು ತಾನು ತೀರಿಸುವುದಾಗಿ ರಮೇಶ ಹೇಳಿದ್ದರು. ಮದುವೆಯ ನಂತರದಲ್ಲಿ ಮಗ ರಮೇಶ ಹೆಂಡತಿ ಹಾಗೂ ಮಗುವಿನೊಂದಿಗೆ ತಂದೆ-ತಾಯಿ ಇದ್ದ ಮನೆಯಲ್ಲಿಯೇ ಪ್ರತ್ಯೇಕವಾಗಿ ಅಡುಗೆ ಮಾಡಿಕೊಂಡು ವಾಸಿಸಲು ಹತ್ತಿದ್ದರು. ತಂದೆ ಮತ್ತು ತಾಯಿಗೆ ಹೊಟ್ಟೆ ಬಟ್ಟೆಗೆ ಏನೂ ಕೊಡದೇ ಸಾಲವನ್ನು ಸಹ ತುಂಬಿಲ್ಲ ಎಂದು ದೂರು ನೀಡಿರುವ ತಂಮದೆ ಕೃಷ್ಣ ಮೊಗೇರ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಭಟ್ಕಳದಿಂದ ಮುಂಬೈಗೆ ತೆರಳಿ ಕಟ್ಟಿದ ಸಂಸ್ಥೆಗೆ ನೂರು ವರ್ಷ

ಬ್ಯಾಂಕಿನಿಂದ ನೋಟೀಸ್ ಬಂದಿದ್ದಕ್ಕೆ ತಂದೆ ಕೃಷ್ಣ ಮಗನಿಗೆ ಸಾಲ ತುಂಬಲು ತಿಳಿಸಿದರು. ಆದರೆ ತಂದೆ ಮತ್ತು ತಾಯಿಯ ಹತ್ತಿರ ಮಗ ರಮೇಶ ಜಗಳ ಮಾಡುತ್ತಿದ್ದ. ಜು.೨೨ರಂದು ಮಧ್ಯಾಹ್ನ ೧೨ ಗಂಟೆಗೆ ಕೃಷ್ಣ ಮೊಗೇರ ಸಾಲ ತುಂಬಲು ಮಗನಿಗೆ ತಿಳಿಸಿದಾಗ ಅವಾಚ್ಯವಾಗಿ ಬೈಯ್ದು ಹೊಡೆಯಲು ಮುಂದಾದ. ಕೈಯಿಂದ ಮುಖಕ್ಕೆ ಒಮ್ಮೇಲೆ ಒದ್ದಿ ದೂಡಿಹಾಕಿ ಇನ್ನೊಮ್ಮೆ ಸಾಲ ತುಂಬಲು ಹೇಳಿದರೆ ನಿಮ್ಮಿಬ್ಬರಿಗೂ ಬಿಡುವುದಿಲ್ಲಾ ಎಂದು ತಂದೆ-ತಾಯಸಿಗೆ ಜೀವದ ಬೆದರಿಕೆ ಹಾಕಿದ್ದಾನೆ. ದೂಡಿ ಹಾಕಿದ್ದರಿಂದ ತಂದೆ ಕೃಷ್ಣ ಮೊಗೇರ ಬಿದ್ದು ಎಡಕ್ಕೆ ಬುಜದ ಮೂಳೆಗೆ ಹೊಡೆತಬಿದ್ದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಜನನಿಬಿಡ ಸ್ಥಳದಲ್ಲಿ ಅನಾಥ ಕಾರು