ಭಟ್ಕಳ(Bhatkal): ಇಲ್ಲಿನ ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ಭಟ್ಕಳ ಉಪವಿಭಾಗದ ಪೊಲೀಸ್ ಠಾಣೆ ಸಹಯೋಗದಲ್ಲಿ ನಡೆದ ಕಾರ್ಯಾಗಾರದಲ್ಲಿ ಸೈಬರ್ ಕ್ರೈಂ (cyber crime) ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (superintendent of police) ನಾರಾಯಣ ಎಂ. ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮವನ್ನು ಸೈಬರ್ ಪೋಸ್ಟರ್ (cyber poster) ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿದ ನಾರಾಯಣ ಎಂ., ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ (technology), ಸಾಮಾಜಿಕ ಜಾಲತಾಣಗಳನ್ನು (social media) ಸರಿಯಾಗಿ ಬಳಸಿಕೊಳ್ಳಿ. ಇದರಿಂದ ಎಷ್ಟು ಉಪಯೋಗವಿದೆಯೊ ಅಷ್ಟೇ ಹಾನಿಯೂ ಇದೆ. ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಇದನ್ನೂ ಓದಿ : ಸೆಪ್ಟೆಂಬರ್ ೨೬ರಂದು ವಿವಿಧೆಡೆ ಅಡಿಕೆ ಧಾರಣೆ
ಬ್ಯಾಂಕ್, ಆಸ್ಪತ್ರೆ, ಝೆರಾಕ್ಸ್ ಅಂಗಡಿ, ಪ್ರಯಾಣಿಸುವಾಗ, ವಿಮಾನ ನಿಲ್ದಾಣ, ದೊಡ್ಡ ಮಾಲ್, ಸೀಮ್ ಖರೀದಿ, ಆಸ್ಪತ್ರೆ ಆನ್ಲೈನ್ ಎಪ್ಲಿಕೇಶನ್ ಹೀಗೆ ಹಲವು ಕಡೆಗಳಲ್ಲಿ ನಮ್ಮ ವೈಯಕ್ತಿಕ ದಾಖಲೆ, ಮಾಹಿತಿಯನ್ನು ನೀಡಿರುತ್ತೇವೆ. ಕೆಲವೊಮ್ಮೆ ಇದು ಸೋರಿಕೆಯಾಗಿ, ಇದನ್ನು ಪಡೆದ ಸೈಬರ್ ಕಳ್ಳರು ನಮ್ಮ ಚಲನವಲನಗಳನ್ನು ಗಮನಿಸಿ ನಮ್ಮ ಅವಶ್ಯಕ್ಕೆ ಅನುಗುಣವಾಗಿ ಮರಳು ಮಾಡುತ್ತಾರೆ. ಉದ್ಯೋಗ ಕೊಡಿಸುವದಾಗಿ, ಉಡುಗೊರೆ ನೀಡುವದಾಗಿ, ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವದಾಗಿ ಹೀಗೆ ಅವರ ಆಸಕ್ತಿಯನ್ನೇ ಬಂಡವಾಳ ಮಾಡಿಕೊಂಡು ಹಣದೋಚುತ್ತಾರೆ. ಫೇಸ್ಬುಕ್ ಇನ್ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಯುವ ಪೀಳಿಗೆ ಗೆಳೆತನ ಮಾಡುವಾಗ ಚೆನ್ನಾಗಿ ಅರಿತುಕೊಳ್ಳಬೇಕು. ಸುಂದರ ಯುವತಿಯರಿಗೆ ಬಲೆ ಬೀಸಿ ಮಾನವಕಳ್ಳ ಸಾಗಣೆಗೆ ದೂಡಿದ ಕೆಲವು ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ ಎಂದರು.
ಇದನ್ನೂ ಓದಿ : ತಹಶೀಲ್ದಾರ ಸೂಚನೆ ಹಿನ್ನೆಲೆ ಅನಿರ್ದಿಷ್ಟಾವಧಿ ಮುಷ್ಕರ ಮೊಟಕು
ಝೆರಾಕ್ಸ್ ಮಾಡಲು ನೀಡಿದ ದಾಖಲೆಗಳನ್ನು ಸೈಬರ್ ಕಳ್ಳರ ಪಾಲಾಗುವ ನಿದರ್ಶನಗಳಿವೆ. ಅದನ್ನು ಪಡೆದ ಅವರು ನಮಗೆ ತಿಳಿಯದೆ ನಮ್ಮ ಖಾತೆಗಳನ್ನು ತೆರೆದು ಬೇರೆಯವರಿಗೆ ವಂಚಿಸಿದ ಹಲವು ಪ್ರಕರಣಗಳು ನಡೆದಿವೆ. ಸಾಮಾಜಿಕ ಜಾಲತಾಣದಲ್ಲಿ ಹರಡುವ ವಿಷಯಗಳ ಗಂಭೀರತೆ ಅರಿತು ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ. ಸುಳ್ಳು ಸಂದೇಶಗಳನ್ನು ಕಳುಹಿಸದವರಿಗೂ ಶಿಕ್ಷೆ ಖಚಿತ. ಮತಗಳ ನಡುವೆ ಕಲಹ, ಧರ್ಮಗಳ ನಡುವೆ ಜಗಳ, ಧರ್ಮಾಂಧತೆ ಸೃಷ್ಟಿಸಿ ಮಕ್ಕಳ ಮನಸ್ಸು ಪರಿವರ್ತನೆ ಮಾಡಿ ದೇಶದ್ರೋಹ, ಭಯೋತ್ಪಾದನೆಯಂತಹ ಕೃತ್ಯಗಳಿಗೆ ಪ್ರೇರಣೆ ನೀಡುತ್ತಿರುವದು ಸೈಬರ್ ಜಗತ್ತಿನಲ್ಲಿ ನಡೆಯುತ್ತಿದ್ದು ಇವುಗಳಿಂದ ಜಾಗೃತರಾಗಿರಬೇಕು ಎಂದು ಹೇಳಿದರು.
ಇದನ್ನೂ ಓದಿ : ಕವಿವಿ ಕಲಾ ವಿಷಯದಲ್ಲಿ ಎರಡನೇ ರ್ಯಾಂಕ್ ಪಡೆದ ಪೂಜಾ ನಾಯ್ಕ
ಹೆಚ್ಚುತ್ತಿರುವ ಕ್ರೌರ್ಯ, ಕಳವಳ ವ್ಯಕ್ತಪಡಿಸಿದ ಎಸ್ಪಿ ನಾರಾಯಣ, ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಬರ್ಬರ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ, ಚಾಕುವಿನಿಂದ ಇರಿತ, ಸಣ್ಣ ವಿಷಯಕ್ಕೂ ಕೊಲೆಗಳು ಸೇರಿದಂತೆ ಹಿಂಸೆ ನೀಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಮಲು ಪದಾರ್ಥ ಸೇವನೆ, ಸಿನೆಮಾ, ಒಟಿಟಿಯಲ್ಲಿ ತೋರಿಸುವ ಜಗತ್ತು ನಿಜವಾದುದಲ್ಲ. ನಾವು ಬದುಕುತ್ತಿರುವ ಪ್ರಪಂಚವೇ ಸತ್ಯ. ಅಂತಹ ದೃಶ್ಯಗಳನ್ನು ನೋಡಿ ಪ್ರೇರೇಪಣೆಗೊಂಡು ದೌರ್ಜನ್ಯ ನಡೆಸಿದರೆ ಶಿಕ್ಷೆ ಅನುಭವಿಸುವದು ಖಚಿತ. ಅಂತವರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸದಾ ಕಣ್ಗಾವಲು ಇಟ್ಟಿದೆ. ವಿದ್ಯಾರ್ಥಿಗಳು ಜಾಗರೂಕರಾಗಿದ್ದು, ಶಿಕ್ಷಣ ನೀಡಿದ ವಿದ್ಯಾ ಸಂಸ್ಥೆ, ಹುಟ್ಟಿದ ಊರು, ಪಾಲಕರಿಗೆ ಗೌರವ ತರುವ ಕೆಲಸವಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ : ಕಸ ತೆಗೆಯಲು ಹೋಗಿದ್ದಕ್ಕೆ ಹಲ್ಲೆ, ಕೊಲೆ ಬೆದರಿಕೆ
ಈ ಸಂದರ್ಭದಲ್ಲಿ ಡಿವೈಎಸ್ಪಿ ಮಹೇಶ ಎಂ.ಕೆ., ಪಿಐ ಗೋಪಿಕೃಷ್ಣನ ಕೆ.ಆರ್., ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸುರೇಶ ನಾಯಕ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಇದ್ದರು. ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿದರೆ, ಪತ್ರ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.
ಇದನ್ನೂ ಓದಿ : ಉದ್ಯಮಿ ಹತ್ಯೆ ಮಾಡಿದ್ದ ಸುಪಾರಿ ಹಂತಕರ ಬಂಧನ