ಭಟ್ಕಳ (Bhatkal) : ಏಪ್ರಿಲ್-ಜೂನ್ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಕರಾವಳಿಯ (Coastal) ಉತ್ತರ ಕನ್ನಡ (Uttara kannada) ಮತ್ತು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಲಕ ಈರೋಡ್ (Erode) ಮತ್ತು ಬಾರ್ಮರ್ (Barmer) ನಡುವೆ ವಾರದ ವಿಶೇಷ ರೈಲುಗಳು (WEEKLY SPECIAL TRAIN) ಸಂಚರಿಸಲಿವೆ. ಈ ರೈಲು ಉತ್ತರ ಕನ್ನಡ ಜಿಲ್ಲೆಯ ೬ ನಿಲ್ದಾಣಗಳಲ್ಲಿ ನಿಲ್ಲಲಿವೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರೈಲು ಸಂಖ್ಯೆ ೦೬೦೯೭ ಈರೋಡ್ ಜಂಕ್ಷನ್ – ಬಾರ್ಮರ್ ವಾರದ ವಿಶೇಷ ರೈಲು (WEEKLY SPECIAL TRAIN) ಏಪ್ರಿಲ್ ೮ ರಿಂದ ಜೂನ್ ೧೦ರವರೆಗೆ ಮಂಗಳವಾರ ಬೆಳಿಗ್ಗೆ ೬.೨೦ಕ್ಕೆ ಈರೋಡ್‌ನಿಂದ ಹೊರಟು ಮೂರನೇ ದಿನ ಬೆಳಿಗ್ಗೆ ೪.೩೦ಕ್ಕೆ ಬಾರ್ಮರ್ ತಲುಪಲಿದೆ. ರೈಲು ಸಂಖ್ಯೆ ೦೬೦೯೮ ಬಾರ್ಮರ್ – ಈರೋಡ್ ಜಂ. ವಾರದ ವಿಶೇಷ ರೈಲು ಏ.೧೧ರಿಂದ ಜೂ.೧೩ರವರೆಗೆ ಬೆಳಿಗ್ಗೆ ೧೦.೫೦ಕ್ಕೆ ಬಾರ್ಮರ್‌ನಿಂದ ಹೊರಡುತ್ತದೆ. ಮೂರನೇ ದಿನ ಬೆಳಿಗ್ಗೆ ೮.೧೫ಕ್ಕೆ ಈರೋಡ್ ತಲುಪುತ್ತದೆ ಎಂದು ದಕ್ಷಿಣ ರೈಲ್ವೆ (Southern Railway) ಮತ್ತು ಕೊಂಕಣ ರೈಲ್ವೆ (Konkan Railway) ಕಾರ್ಪೊರೇಷನ್ ಲಿಮಿಟೆಡ್‌ನಿಂದ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : liquor ban/ ಭಟ್ಕಳದಲ್ಲಿ ಮದ್ಯ ಮಾರಾಟ ನಿಷೇಧ
ಕರ್ನಾಟಕದಲ್ಲಿ (Karnataka) ರೈಲು ಮಂಗಳೂರು ಜಂಕ್ಷನ್ (Mangaluru Junction), ಉಡುಪಿ (Udupi), ಕುಂದಾಪುರ (Kundapur), ಮೂಕಾಂಬಿಕಾ ರಸ್ತೆ ಬೈಂದೂರು (Byndoor), ಭಟ್ಕಳ (Bhatkal), ಮುರ್ಡೇಶ್ವರ (Murdeshwar), ಕುಮಟಾ (Kumta), ಗೋಕರ್ಣ ರಸ್ತೆ (Gokarna Road), ಅಂಕೋಲಾ (Ankola) ಮತ್ತು ಕಾರವಾರದಲ್ಲಿ (Karwar) ನಿಲುಗಡೆ ಹೊಂದಿದೆ. ಈ ರೈಲು ಎರಡು ೩-ಟೈರ್ ಎಸಿ, ೧೪ ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ಎರಡನೇ ದರ್ಜೆ ಮತ್ತು ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್‌ಗಳನ್ನು ಒಳಗೊಂಡಿದೆ.
ಇದನ್ನೂ ಓದಿ : Bangaramakki/ “ಭಕ್ತರ ಪಾಲಿನ ಬಂಗಾರವೇ ಬಂಗಾರಮಕ್ಕಿ”
ಈರೋಡ್ ಜೂ. – ಬಾರ್ಮರ್ ಸಾಪ್ತಾಹಿಕ ವಿಶೇಷ ರೈಲು ಮಂಗಳವಾರ ಮಂಗಳೂರು ಜಂಕ್ಷನ್‌ನಿಂದ ಸಂಜೆ ೪.೧೦ಕ್ಕೆ, ಉಡುಪಿ ೫.೫೨ಕ್ಕೆ, ಕುಂದಾಪುರ ೬.೩೦ಕ್ಕೆ, ಬೈಂದೂರು ೭.೦೨ಕ್ಕೆ, ಭಟ್ಕಳ ೭.೩೦ಕ್ಕೆ, ಮುರ್ಡೇಶ್ವರ ೭.೫೨ಕ್ಕೆ, ಕುಮಟಾ ರಾತ್ರಿ ೮.೪೨ಕ್ಕೆ, ಗೋಕರ್ಣ ರಸ್ತೆ ೯.೦೨ಕ್ಕೆ, ಅಂಕೋಲಾ ೯.೧೪ಕ್ಕೆ ಮತ್ತು ಕಾರವಾರದಿಂದ ೯.೫೨ಕ್ಕೆ ಹೊರಡುತ್ತದೆ. ಬಾರ್ಮರ್ – ಈರೋಡ್ ಜಂಕ್ಷನ್ ವಾರದ ವಿಶೇಷ ರೈಲು ಭಾನುವಾರದಂದು ಕಾರವಾರದಿಂದ ಬೆಳಿಗ್ಗೆ ೪.೫೨ಕ್ಕೆ, ಅಂಕೋಲಾದಿಂದ ೫.೨೦ಕ್ಕೆ, ಗೋಕರ್ಣ ರಸ್ತೆಯಿಂದ ೫.೩೨ಕ್ಕೆ, ಕುಮಟಾದಿಂದ ೫.೫೨ಕ್ಕೆ, ಮುರ್ಡೇಶ್ವರದಿಂದ ೬.೧೨ಕ್ಕೆ, ಭಟ್ಕಳದಿಂದ ೬.೩೨ಕ್ಕೆ, ಬೈಂದೂರು ೬.೪೬ಕ್ಕೆ, ಕುಂದಾಪುರ ೭.೩೨ಕ್ಕೆ, ಉಡುಪಿ ೮.೩೨ಕ್ಕೆ ಮತ್ತು ಮಂಗಳೂರು ಜಂಕ್ಷನ್‌ನಿಂದ ೧೦.೩೦ಕ್ಕೆ ಹೊರಡುತ್ತದೆ.
ಇದನ್ನೂ ಓದಿ : Bangaramakki/ ಬಂಗಾರಮಕ್ಕಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ