ಭಟ್ಕಳ : ಸಕಲೇಶಪುರ ಮತ್ತು ಸುಬ್ರಹ್ಮಣ್ಯ ನಡುವೆ ಗುಡ್ಡಕುಸಿತದಿಂದ ಬೆಂಗಳೂರಿಗೆ ರೈಲಿಲ್ಲ ಎಂಬ ಚಿಂತೆ ಬಿಡಿ. ಕರಾವಳಿಯ ಜನರಿಗೆ ಬೆಂಗಳೂರಿಗೆ ತೆರಳಲು ಎರಡು ವಿಶೇಷ ರೈಲು(special train) ಸಂಚರಿಸಲಿವೆ. ಮಡಗಾಂವ್ ರೈಲು ನಿಲ್ದಾಣ ಮತ್ತು ಕಾರವಾರ ರೈಲು ನಿಲ್ದಾಣದಿಂದ ಪಾಲಕ್ಕಾಡ್ ಮತ್ತು ಶೋರನೂರ್ ಮೂಲಕ ಬೆಂಗಳೂರಿಗೆ ವಿಶೇಷ ರೈಲುಗಳು ಸಂಚರಿಸಲಿವೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್  ಫಾಲೋವ್ ಮಾಡಲು ಇಲ್ಲಿ ಒತ್ತಿ.

ರೈಲು ಸಂಖ್ಯೆ ಮಡಗಾಂವ್ ಜಂಕ್ಷನ್ – ಕೆಎಸ್‌ಆರ್ ಬೆಂಗಳೂರು ಏಕಮುಖ ವಿಶೇಷ ರೈಲು(special train) ಜುಲೈ ೩೦ ರಂದು ಸಂಜೆ ೪.೩೦ ಕ್ಕೆ ಮಡಗಾಂವ್‌ನಿಂದ ಹೊರಟು ೩೧ ರಂದು ಮಧ್ಯಾಹ್ನ ೩.೩೦ ಕ್ಕೆ ತಲುಪಲಿದೆ. ಈ ರೈಲು ಕಾರವಾರ, ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಬಾರ್ಕೂರು, ಉಡುಪಿ, ಮೂಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ತಲಶ್ಶೇರಿ, ಕೋಝಿಕ್ಕೋಡ್, ತಿರೂರು, ಶೋರನೂರು ಜಂಕ್ಷನ್‌, ಪಾಲಕ್ಕಾಡ್, ಕೊಯಮತ್ತೂರು ಜಂಕ್ಷನ್, ತಿರುಪುರ್, ಈರೋಡ್ ಜಂಕ್ಷನ್, ಸೇಲಂ, ಬಂಗಾರಪೇಟೆ, ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಇದನ್ನೂ ಓದಿ : ಭಟ್ಕಳದಲ್ಲಿ ಶಾಂತಿ ಸಭೆ ನಡೆಯುತ್ತಿದೆಯೆ?

ರೈಲು ಸಂಖ್ಯೆ ೦೧೬೫೬ ಕಾರವಾರ – ಯಶವಂತಪುರ ವಿಶೇಷ ರೈಲು ಜುಲೈ ೩೧ ರಂದು ಬೆಳಿಗ್ಗೆ ೫.೩೦ ಕ್ಕೆ ಕಾರವಾರದಿಂದ ಹೊರಟು ಆಗಸ್ಟ್ ೧ ರಂದು ೨.೧೫ ಕ್ಕೆ ಯಶವಂತಪುರವನ್ನು ತಲುಪಲಿದೆ. ಇದು ಕಾರವಾರ, ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಬಾರ್ಕೂರು, ಉಡುಪಿ, ಮೂಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ತಲಶ್ಶೇರಿ, ಕೋಝಿಕ್ಕೋಡ್, ತಿರೂರು, ಶೋರನೂರು ಜಂಕ್ಷನ್, ಪಾಲಕ್ಕಾಡ್, ಕೊಯಮತ್ತೂರು ಜಂಕ್ಷನ್, ತಿರುಪುರ್, ಈರೋಡ್ ಜಂಕ್ಷನ್, ಸೇಲಂ, ಬಂಗಾರಪೇಟೆ, ಕೃಷ್ಣರಾಜಪುರಂ, ಮತ್ತು ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಇದನ್ನೂ ಓದಿ : ಅತಿ ವೇಗದಿಂದ ವಾಹನ ಚಲಾಯಿಸಿದರೆ ದಂಡ ಪಕ್ಕಾ!

ರೈಲು 1 ಎಸಿ 3-ಟೈರ್, 6 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ಎರಡನೇ ದರ್ಜೆ ಮತ್ತು 2 ಎಸ್‌ಎಲ್‌ಆರ್‌ಡಿ ಕೋಚ್‌ಗಳು ಸೇರಿದಂತೆ 14 ಕೋಚ್‌ಗಳನ್ನು ಒಳಗೊಂಡಿರುತ್ತದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಶರಾವತಿ‌ ನದಿ ಪಾತ್ರದ ನಿವಾಸಿ ಬಗ್ಗೆ ಎಚ್ಚರ ವಹಿಸಿ

ಈ ಮಾರ್ಗ ಬೆಂಗಳೂರು ಪ್ರಯಾಣಕ್ಕೆ ಹೆಚ್ಚಿನ ಸಮಯ ತೆಗೆದುಕೊಂಡರೂ ಕರಾವಳಿ, ಮಲೆನಾಡು ಸಹಿತ ವಿಶೇಷವಾಗಿ‌ ಕೇರಳದ ಪ್ರಾಕೃತಿಕ ಸೌಂದರ್ಯ ಸವಿಯಲು ಉತ್ತಮ‌ ಅವಕಾಶ ಎನ್ನಬಹುದು.