ಬೆಂಗಳೂರು (Bengaluru) : ಭಾರತೀಯ ರೈಲ್ವೆಯು (Indian Railway) ದಸರಾ (Dasara) ಮತ್ತು ದೀಪಾವಳಿ (Deepavali) ಹಬ್ಬದ ಸಮಯದಲ್ಲಿ ಹೆಚ್ಚುವರಿಯಾಗಿ ೬೫೫೬ ವಿಶೇಷ ರೈಲುಗಳನ್ನು (Special trains) ಓಡಿಸಲಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಪ್ರತಿ ವರ್ಷ ಹಬ್ಬಗಳ ಸಂದರ್ಭದಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಈ ವರ್ಷ, ಪ್ರಯಾಣಿಕರ ಹೆಚ್ಚಳಕ್ಕೆ ಅನುಗುಣವಾಗಿ ರೈಲುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಅ.೧ರಿಂದ ವಿಶೇಷ ರೈಲುಗಳ ಓಡಾಟ ಆರಂಭಗೊಂಡಿದ್ದು, ಪ್ರಯಾಣಿಕರ ಒತ್ತಡ ಗಮನಿಸಿ ನ.೩೦ರವರೆಗೆ ಸಂಚರಿಸಲಿವೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನೈಋತ್ಯ ರೈಲ್ವೆಯು (SWR) ೫೨ ಟ್ರಿಪ್‌ಗಳೊಂದಿಗೆ ೨೪ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಮೂರು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ಹೆಚ್ಚಿಸಲಾಗಿದೆ. ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಸರಿಹೊಂದಿಸಲು ೩೪ ರೈಲುಗಳಿಗೆ ಕೋಚ್‌ಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ, ದೀಪಾವಳಿ ಹಬ್ಬಕ್ಕಾಗಿ, ನೈಋತ್ಯ ರೈಲ್ವೆಯು ಕರ್ನಾಟಕದಾದ್ಯಂತ ವಿವಿಧ ಸ್ಥಳಗಳಿಂದ ೮ ಟ್ರಿಪ್‌ಗಳೊಂದಿಗೆ ೬ ವಿಶೇಷ ರೈಲುಗಳನ್ನು (special trains) ಓಡಿಸಲಿದೆ. ನೈಋತ್ಯ ರೈಲ್ವೆಗೆ ೨೬೪ ಟ್ರಿಪ್‌ಗಳೊಂದಿಗೆ ೨೨ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಇತರ ವಲಯ ರೈಲ್ವೆಗಳು ಸಹ ಸೂಚಿಸಿವೆ.

ಇದನ್ನೂ ಓದಿ : ಆತ್ಮಹತ್ಯೆ ಬೆದರಿಕೆ ; ಸಿಬ್ಬಂದಿ ವಿರುದ್ಧ ಅಧಿಕಾರಿಯಿಂದ ದೂರು

ಕಳೆದ ವರ್ಷ, ಭಾರತೀಯ ರೈಲ್ವೆಯು ಒಟ್ಟು ೪೪೨೯ ಹಬ್ಬದ ವಿಶೇಷ ರೈಲುಗಳನ್ನು ಓಡಿಸಿತ್ತು. ಲಕ್ಷಾಂತರ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ಖಾತ್ರಿಪಡಿಸಿತ್ತು. ಹಬ್ಬದ (Festival) ಋತುವಿನಲ್ಲಿ ಪ್ರಯಾಣಿಕರ ವಿಪರೀತ ದಟ್ಟಣೆಯಿಂದಾಗಿ, ಹೆಚ್ಚಿನ ರೈಲುಗಳ ಟಿಕೆಟ್‌ಗಳು ಎರಡರಿಂದ ಮೂರು ತಿಂಗಳ ಮುಂಚಿತವಾಗಿ ವೇಟಿಂಗ್ ಲಿಸ್ಟ್‌ನಲ್ಲಿ ಹೋಗುತ್ತವೆ. ಇದನ್ನು ಪರಿಹರಿಸಲು, ಭಾರತೀಯ ರೈಲ್ವೆ ಈ ವರ್ಷ ಹಬ್ಬದ ಋತುವಿನಲ್ಲಿ ಮತ್ತೊಮ್ಮೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

ಇದನ್ನೂ ಓದಿ : ಲಾಭದಾಸೆಗೆ ಅರ್ಧ ಕೋಟಿ ಕಳೆದುಕೊಂಡ ಮುರ್ಡೇಶ್ವರದ ಗೃಹಿಣಿ