ಭಟ್ಕಳ : ಇಲ್ಲಿನ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ ೪೧ನೇ ವಾರ್ಷಿಕ ಅಥ್ಲೆಟಿಕ್ ಮೀಟ್(Sports day) ಯಶಸ್ವಿಯಾಗಿ ನಡೆಯಿತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಯುಕೆಡಿಎಫ್‌ಎ ಅಧ್ಯಕ್ಷ ಮಾವಿಯಾ ಮೊಹ್ತೇಶಾಮ್ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು .ಈ ವೇಳೆ ಮಾತನಾಡಿದ ಅವರು, ಕ್ರೀಡೆಯ ಮಹತ್ವವನ್ನು ವಿವರಿಸಿದರು.
ಇದನ್ನೂ ಓದಿ : ಸಾವಿಷ್ಕಾರ್ ಫೆಸ್ಟ್ ನಲ್ಲಿ ಎಐಟಿಎಂ ವಿದ್ಯಾರ್ಥಿಗಳ ಸಾಧನೆ
ಪ್ರಾಂಶುಪಾಲ ಡಾ. ಕೆ. ಫಜಲುರಹ್ಮಾನ್ ಮಾತನಾಡಿ, ಆಟದಲ್ಲಿ ಗೆಲವು ಸೋಲು ಮುಖ್ಯವಲ್ಲ, ಭಾಗವಹಿಸುವದೇ ಮುಖ್ಯ ಎಂದರು. ವೇದಿಕೆಯ ಮೇಲೆ ರಿಜಿಸ್ಟರಾರ್ ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು ಇದ್ದರು.
ಇದನ್ನೂ ಓದಿ : ಎಸ್ಸೆಸ್ಸೆಲ್ಸಿ ಪರೀಕ್ಷೆ; ಭಟ್ಕಳ ತಾಲೂಕಿನಲ್ಲಿ ಶೇ.96 ಫಲಿತಾಂಶ
ಬೆಳಿಗ್ಗೆ ೧೦ ಗಂಟೆಗೆ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ(Sports day) ಪ್ರಾರಂಭವಾಯಿತು. ಒಟ್ಟು 12 ವಿವಿಧ ಕ್ರೀಡೆಗಳು ಆಯೋಜಿಸಲ್ಪಟ್ಟವು. ಪ್ರಾಂಶುಪಾಲ ಡಾ.ಫಜಲುರ್ ರೆಹಮಾನ್ ಕೆ, ರಿಜಿಸ್ಟ್ರಾರ್ ಪ್ರೊ.ಜಾಹಿದ್ ಕರೂರಿ, ಮಾಧ್ಯಮ ಸಂಯೋಜಕ ಪ್ರೊ.ಸುಬ್ರಹ್ಮಣ್ಯ ಗಜಾನನ ಭಾಗವತ್, ಪ್ರೊ.ಜುಹೇರ್, ಪ್ರೊ.ಸೈಯದ್ ನೂರೇನ್, ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಇದ್ದರು.