ಭಟ್ಕಳ (Bhatkal) : ೨೦೨೪-೨೫ನೇ ಸಾಲಿನ ಅಕ್ಟೋಬರ್ ೧೫ರಂದು ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರೌಢಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡ ಮಾಡುವ “ಶಿಕ್ಷಣ ರತ್ನ” ರಾಜ್ಯ ಪ್ರಶಸ್ತಿಗೆ (State Award) ಇಲ್ಲಿನ ಕುಂಟವಾಣಿ ಸರಕಾರಿ ಪ್ರೌಡಶಾಲೆ ಚಿತ್ರಕಲಾ ಶಿಕ್ಷಕ ಚೆನ್ನವೀರಪ್ಪ ಆರ. ಹೊಸಮನಿ ಭಾಜನರಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಂಗಳೂರಿನ (Bengaluru) ಸೂರ್ಯ ಪೌಂಡೇಶನ್ ಹಾಗೂ ಸ್ಪಾರ್ಕ ಅಕಾಡಮಿ ವತಿಯಿಂದ ಬೆಂಗಳೂರಿನ ಇಂಡೋಗ್ಲೋಬ್ ಗ್ರೂಪ್ ಆಫ್ ಇನ್ಸಟ್ಯೂಶನ್ಸ ಮತ್ತು ಶಿಕ್ಷಕರ ಪ್ರತಿಭಾ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಚಿತ್ರಕಲಾ ಶಿಕ್ಷಕ ಚೆನ್ನವೀರಪ್ಪ ಆರ. ಹೊಸಮನಿ ಅವರಿಗೆ ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ (State Award) ನೀಡಲಾಯಿತು. ಇವರಿಗೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದದವರು ಹಾಗು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಇದನ್ನೂ ಓದಿ : ಹಿಂದಿ ಶಿಕ್ಷಕಗೆ ಡಾಕ್ಟರೇಟ್ ಪದವಿ ಪ್ರದಾನ