ಭಟ್ಕಳ: ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ (bodybuilding competition) ಫೆಬ್ರವರಿ ೨೨ರಂದು ಸಂಜೆ ೬ ಗಂಟೆಗೆ ನಗರದ ಆನಂದಾಶ್ರಮ ಶಾಲೆಯ ಮೈದಾನದಲ್ಲಿ ನಡೆಯಲಿದೆ. ಈ ಸ್ಪರ್ಧೆ ಒಟ್ಟೂ ೮ ವಿಭಾಗಗಳಲ್ಲಿ ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ೨೫೦ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಕುರಿತು ಪೋಸ್ಟರ್ ಬಿಡುಗಡೆಗೊಳಿಸಿದ ಬಾಡಿಬಿಲ್ಡಿಂಗ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ ಮಾಹಿತಿ ನೀಡಿ, ”ಸ್ಪರ್ಧೆಯನ್ನು ನ್ಯಾಯಸಮ್ಮತವಾಗಿ ನಡೆಸಲು ರಾಜ್ಯದ ೨೫ರಿಂದ ೩೦ ಮಂದಿ ಅನುಭವಿ ರೆಫ್ರಿಗಳನ್ನು ನಿಯೋಜಿಸಲಾಗಿದೆ. ಉತ್ತಮ ಆರೋಗ್ಯ, ಶ್ರೇಷ್ಠ ದೈಹಿಕ ಸಾಮರ್ಥ್ಯ ಹಾಗೂ ಫಿಟ್ ಜೀವನಶೈಲಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದೇಹದಾರ್ಢ್ಯ ಸ್ಪರ್ಧೆ (bodybuilding competition) ಆಯೋಜಿಸಲಾಗಿದೆ. ಸಂಜೆ ೬ ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಸಚಿವ ಮಂಕಾಳ ವೈದ್ಯ (Mankal Vaidya) ಅವರ ಸಹಕಾರದಿಂದ ತಾಲೂಕಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದೆ” ಎಂದು ಅವರು ಹೇಳಿದರು.
ಸಂಘದ ಅಧ್ಯಕ್ಷ ಅಜಿಜುರ್ ರಹಮಾನ್, ಗೌರವಾಧ್ಯಕ್ಷ ನಜೀರ ಕಾಶಿಮ್ ಜಿ, ಸದಸ್ಯರಾದ ಗಣೇಶ ನಾಯ್ಕ, ಫಾಸ್ಕಲ್ ಗೋಮ್ಸ್, ರಾಘವೇಂದ್ರ ಗೊಂಡ, ವಿವೇಕ ನಾಯ್ಕ ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಇದನ್ನು ಓದಿ: Follow up/ ಅಪಘಾತದಲ್ಲಿ ಭಟ್ಕಳದ ಯುವಕ ಸಾವು ಪ್ರಕರಣ: ಒಬ್ಬ ಗಂಭೀರ, ಮೂವರು ಪಾರು



