ಭಟ್ಕಳ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾದಲ್ಲಿ (Ankola) ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ (Pratibha Karanji) ಸ್ಪರ್ಧೆಗಳಲ್ಲಿ ಭಟ್ಕಳದ ಚಿತ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟ ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಿದ್ಯಾರ್ಥಿ ಸುದೀಪ್ ರಾಜೇಶ್ ಆಚಾರಿ ಗಝಲ್ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸಂಹಿತಾ ನವೀನ್ ಕಂಬದಕೋಣೆ ಹಿಂದಿ ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಗಝಲ್ ವಿಭಾಗಕ್ಕೆ ಶಿಕ್ಷಕಿ ಧನ್ಯವತಿರಾವ್ ಹಾಗೂ ಹಿಂದಿ ಭಾಷಣ ವಿಭಾಗಕ್ಕೆ ಕಾಂಚನ ಮೇಸ್ತಾ ಮಾರ್ಗದರ್ಶನ ನೀಡಿದ್ದರು.
ಇದನ್ನು ಓದಿ: Sodigadde jatra/ ಜನವರಿ 23ರಿಂದ ಸೋಡಿಗದ್ದೆ ಜಾತ್ರೆ
ಪ್ರತಿಭಾ ಕಾರಂಜಿಯಲ್ಲಿ (Pratibha Karanji) ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶ್ರೀವಲಿ ಟ್ರಸ್ಟ್‌ನ ಶೈಕ್ಷಣಿಕ ಸಲಹೆಗಾರರಾದ ಡಾ ರವೀಂದ್ರ ಕೈಕಿಣಿ, ಎಂ ಟಿ ಗೌಡ, ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಭಟ್ಕಳ, ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಊರ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನು ಓದಿ: debate competition/ ಶ್ರೀವಲ್ಲಿ ಪ್ರೌಢಶಾಲೆಯ ನಾಗರಾಜ ನಾಯ್ಕ ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ


