ಭಟ್ಕಳ (Bhatkal): ಶಿರಶಿಯ (Sirsi) ಮಾರಿಕಾಂಬ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪದವಿ ಪೂರ್ವ (Pre university) ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳದ ಆನಂದಾಶ್ರಮ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ (state sports) ಆಯ್ಕೆ ಆಯ್ಕೆಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸೆಪ್ಟೆಂಬರ್ ೨೩ರಿಂದ ೨೫ರವರೆಗೆ ನಡೆದ ಕ್ರೀಡಾಕೂಟದಲ್ಲಿ ಭಟ್ಕಳದ ಆಂದಾಶ್ರಮ ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ ನಾಯ್ಕ ತ್ರಿವಿಧ ಜಿಗಿತದಲ್ಲಿ ಪ್ರಥಮ, ಪೊಲ್ ವೊಲ್ಟ ದ್ವಿತೀಯ, ೪×೧೦೦ ರಿಲೆ ಪ್ರಥಮ ಹಾಗೂ ೨೦೦ ಮೀಟರ್ ಓಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗ್ರೂಪ್ ವಿಭಾಗದ ವಾಲಿಬಾಲ್ (Vollyball) ಪಂದ್ಯದಲ್ಲಿ ಶ್ರೇಯಾ, ಪ್ರಾರ್ಥನಾ, ಮನಾಲಿ, ಮೆಲ್ವಿಕಾ, ಹನ್ಸಿಕಾ, ಅನಿಶಾ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : ಶ್ರೀ ಗುರು ಸುಧೀಂದ್ರ ಕಾಲೇಜಿನ ಇಬ್ಬರಿಗೆ ರ‍್ಯಾಂಕ್

ಅದೇ ರೀತಿ ಬಾಲ್ ಬ್ಯಾಡ್ಮಿಂಟನ್ (Ball Badminton) ಸ್ಪರ್ಧೆಯಲ್ಲಿ ಅನ್ವಿಟಾ ಕಡಲೆ, ಟೇಬಲ್ ಟೆನ್ನಿಸ್ (Table Tennis) ಸ್ಪರ್ಧೆಯಲ್ಲಿ ಸಾಹಿಲ್ ಖಾನ್, ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಪುಲ್ ಪಡಿಯಾರ್, ಕರಾಟೆಯಲ್ಲಿ ಉಮರ್ ಮತ್ತು ಸುಜನ್ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ರಾಜ್ಯ ಮಟ್ಟಕ್ಕೆ (State sports) ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕ ಮಹೇಶ ನಾಯ್ಕರವರಿಗೆ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಶ್ಲಾಘಿಸಿದೆ.

ಇದನ್ನೂ ಓದಿ : Convocation/ ಕವಿವಿ ಕಲಾ ವಿಷಯದಲ್ಲಿ ಎರಡನೇ ರ್ಯಾಂಕ್‌ ಪಡೆದ ಪೂಜಾ ನಾಯ್ಕ