ಭಟ್ಕಳ (Bhatkal) : ತಾಲೂಕಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಅಂಜುಮನ್ (Anjuman) ಹಾಮಿ ಇ ಮುಸ್ಲಿಮೀನ್ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೆಜ್ ಮೆಂಟ್ (AITM) ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ STEM- 2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತವನ್ನು ಪ್ರತಿನಿಧಿಸುವ STEM ಪರಿಕಲ್ಪನೆಯು ಎಲ್ಲಾ ನಾಲ್ಕು ವಿಷಯಗಳನ್ನು ಮಿಶ್ರಣ ಮಾಡುವುದು ಮತ್ತು ಅವುಗಳನ್ನು ಪ್ರತ್ಯೇಕವಾಗಿ ಕಲಿಸುವ ಬದಲು ಹೊಂದಿಕೊಳ್ಳುವ ಕಲಿಕೆಯ ವಿಧಾನವನ್ನು ರಚಿಸುವುದಾಗಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಪರಸ್ಪರ ಸಂಬಂಧ ಹೊಂದಿವೆ. ಜೈವಿಕ ತಂತ್ರಜ್ಞಾನವು STEM ಶಿಕ್ಷಣದ ಒಂದು ಭಾಗವಾಗಿದೆ. ಅಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಯೋಜನೆಯು ನವೀನ ಕಲ್ಪನೆಯನ್ನು ಸೃಷ್ಟಿಸುತ್ತದೆ. ಜೀವಶಾಸ್ತ್ರವನ್ನು ಆಧರಿಸಿದ ತಂತ್ರಜ್ಞಾನ ಎಂದು ಕಾರ್ಯಕ್ರಮದ ಸಂಯೋಜಕ ಅನಂತಮೂರ್ತಿ ಶಾಸ್ತ್ರಿ ತಿಳಿಸಿದರು.
ಇದನ್ನೂ ಓದಿ : ಭಟ್ಕಳದಲ್ಲಿ ಪಡಿತರ ಅಕ್ಕಿ ಸಾಗಾಟ ಪತ್ತೆ
ಈ ಪರಿಕಲ್ಪನೆಯು ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ನವೀನವಾಗಿ ಅನ್ವಯಿಸಲು ಪ್ರೋತ್ಸಾಹಿಸುತ್ತದೆ. ಈ ಶಿಕ್ಷಣವು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸವಾಲಿನ ಪ್ರಾಯೋಗಿಕ ಅಧ್ಯಯನಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ. ಆತ್ಮವಿಶ್ವಾಸ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಅಂಜುಮನ್ ಕಾಲೇಜಿನ ಪ್ರಾಂಶುಪಾಲ ಡಾ. ಫಜ್ಲೂರ ರೆಹಮಾನ್ ಕೆ. ತಿಳಿಸಿದರು.
ಇದನ್ನೂ ಓದಿ : ಕೋಲಾರಕ್ಕೆ ಪ್ರಯಾಣ ಬೆಳೆಸಿದ ಶಾಲಾ ಮಕ್ಕಳು
ರಾಜ್ಯದ ವಿವಿಧ ಕಡೆಯಿಂದ ಸುಮಾರು 450 ಪಿ.ಯು. ವಿದ್ಯಾರ್ಥಿಗಳು ಆಗಮಿಸಿದ್ದರು. ಮುಖ್ಯ ಅತಿಥಿಯಾಗಿ ನೌಮನ್ ಪಟೇಲ್ ಶಾಬಂದ್ರಿ ಭಾಗವಹಿಸಿದ್ದರು. AITM ಪ್ರಾಂಶುಪಾಲ ಡಾ. ಕೆ ಫಜ್ಲೂರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ, ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ. ಅನಂತಮೂರ್ತಿ ಶಾಸ್ತ್ರಿ ವೇದಿಕೆಯ ಮೇಲಿದ್ದರು. ಪ್ರೊಫೆಸರ್ ಕ್ವಾರತಲಿನ್ ಸ್ವಾಗತಿಸಿದರು.
ಪ್ರೊಫೆಸರ್ ಶ್ರೀಶೈಲ ಭಟ್ ವಂದಿಸಿದರು.
ಇದನ್ನೂ ಓದಿ : Janaspandana/ ಬೇಂಗ್ರೆಯಲ್ಲಿ ಸಚಿವರ ಜನಸ್ಪಂದನ ಸಭೆ