ಭಟ್ಕಳ (Bhatkal) : ಆರು ಜನರ ಗುಂಪೊಂದು ವಿದ್ಯಾರ್ಥಿಗೆ ಮನೆ ಬಳಿ ಬಂದು ಹಲ್ಲೆ ನಡೆಸಿರುವ (Student assaulted) ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮದೀನಾ ಕಾಲೋನಿ ೨ನೇ ಕ್ರಾಸ್ ನಿವಾಸಿ ಆಕೀಬ್ ಅಬ್ದುಲ್ ಅಜೀಜ್ (೧೯) ಹಲ್ಲೆಗೊಳಗಾದ ವಿದ್ಯಾರ್ಥಿ (Student assaulted). ಇವರು ಫೆ.೧೦ರಂದು ರಾತ್ರಿ ೧೦.೩೦ರ ಸುಮಾರಿಗೆ ಮನೆ ಬಳಿ ಇದ್ದಾಗ ಗುಂಪು ಹಲ್ಲೆ ನಡೆಸಿದೆ. ಭಟ್ಕಳದವರೇ ಆದ ವಹಾಬ್, ಇರ್ಷಾದ್, ಸಲ್ಮಾನ್, ಉಜೈದ್ ಮತ್ತು ಇತರ ಮೂವರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ೧೬ ದಿನಗಳ ನಂತರ ಫೆ.೨೬ರಂದು ದೂರು (Complaint) ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಭಟ್ಕಳ ಶಹರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : Teacher injured/ ಅಪಘಾತದಲ್ಲಿ ಶಿಕ್ಷಕಗೆ ಗಾಯ