ಭಟ್ಕಳ (Bhatkal): ಸುರತ್ಕಲ್ ನ (Suratkal) ಎನ್.ಐ.ಟಿ.ಕೆ.ಯಲ್ಲಿ (NITK) ಆಯೋಜಿಸಲಾದ ರಾಷ್ಟ್ರಮಟ್ಟದ (National Level) ಕೃತಕ ಬುದ್ದಿಮತ್ತೆ (artificial intelligence) ಮತ್ತು ಮಷೀನ್ ಲರ್ನಿಂಗ (Machine Learning) ತರಬೇತಿಯಲ್ಲಿ (Training) ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ (SGS College) ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇನ್ಸಿಡೆಂಟ್-೨೫ ರಾಷ್ಟ್ರಮಟ್ಟದ ಫೆಸ್ಟ್ ಅಂಗವಾಗಿ ರಿಮಾರ್ಕ್ ಸ್ಕಿಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ತರಬೇತಿ (Training) ಆಯೋಜಿಸಲಾಗಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶ್ರೀ ಗುರು ಸುಧೀಂದ್ರ ಕಾಲೇಜಿನ (Sudhindra College) ಬಿ.ಸಿ.ಎ. ವಿದ್ಯಾರ್ಥಿಗಳಾದ ಕಾರ್ತಿಕ ದೇವಾಡಿಗ, ನಂದನ ನಾಯ್ಕ, ಮಹಾಂತೇಶ ಮೊಗೇರ ಹಾಗೂ ದಿವಾಕರ ಗೊಂಡ ಭಾಗವಹಿಸಿದ್ದರು. ಇವರಿಗೆ ಸಂಸ್ಥೆಯ ಅಧ್ಯಕ್ಷ ಡಾ. ಸುರೇಶ ನಾಯಕ ಪ್ರಮಾಣಪತ್ರ ವಿತರಿಸಿ ಅಭಿನಂದಿಸಿದ್ದಾರೆ. “ಕೃತಕ ಬುದ್ದಿಮತ್ತೆ ಮತ್ತು ಮಷೀನ್ ಲರ್ನಿಂಗ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಂಡಿರುವುದು ಗಮನಾರ್ಹ ಸಂಗತಿ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಾಚಾರ್ಯ ಶ್ರೀನಾಥ ಪೈ, ಉಪ-ಪ್ರಾಚಾರ್ಯ ವಿಖ್ಯಾತ ಪ್ರಭು, ಉಪನ್ಯಾಸಕಿಯರಾದ ವಿದ್ಯಾ ಹಾಗೂ ವೀಣಾ ಉಪಸ್ಥಿತರಿದ್ದರು.
ಇದನ್ನೂ ಓದಿ : express trains/ ಎಕ್ಸಪ್ರೆಸ್ ರೈಲುಗಳಿಗೆ ಪ್ರಾಯೋಗಿಕ ನಿಲುಗಡೆ; ಎಲ್ಲೆಲ್ಲಿ ಗೊತ್ತಾ?