ಭಟ್ಕಳ (Bhatkal) : ಸಮಾಜ ಸೇವಕ, ಶಿಕ್ಷಣ ಪ್ರೇಮಿ, ದಾನಿ ಎಂದೇ ಚಿರಪರಿಚಿತರಾದ ತಾಲೂಕಿನ ಗೌಡ ಸಾರಸ್ವತ ಬ್ರಾಹ್ಮಣ (GSB) ಸಮಾಜದ ಮುಖಂಡ ಸುಬ್ರಾಯ ದೇವಿದಾಸ ಕಾಮತ (೭೯) ಇಂದು ಶುಕ್ರವಾರ ಹೃದಯಸ್ತಂಭನದಿಂದ ನಿಧನರಾದರು (Subray Kamath died). ಭಟ್ಕಳ ಜಿಎಸ್ಬಿ ಸಮಾಜದ ಅಧ್ಯಕ್ಷರಾಗಿದ್ದ ಅವರು, ಮಾರುತಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಉಪಾಧ್ಯಕ್ಷರೂ ಆಗಿದ್ದರು. ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡು ಮಾರ್ಗದರ್ಶನ ನೀಡುತ್ತಿದ್ದರು. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಿದ್ದರು. ಮೃತರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಡುಬಡತನದಿಂದ ಜೀವನದ ಪಯಣ ಆರಂಭಿಸಿದ ಸುಬ್ರಾಯ ಕಾಮತ ತಾಲೂಕಿನ ಹಲ್ಯಾಣಿಯಲ್ಲಿ ಕೃಷಿಕರಾಗಿ ಹಲವರ ಪಾಲಿನ ಅನ್ನದಾತರಾಗಿದ್ದರು. ಅಲ್ಲಿಯ ಸರ್ಕಾರಿ ಶಾಲೆಗೆ ತಮ್ಮ ಸ್ಥಳವನ್ನು ನೀಡಿ ಗ್ರಾಮೀಣ ಭಾಗದ ಜನರು ಶಿಕ್ಷಣದಿಂದ ವಂಚಿತರಾಗದಂತೆ ಶಾಲೆಯ ನಿರ್ಮಾಣಕ್ಕೆ ಕಾರಣರಾಗಿದ್ದರು. ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡುವ ಮೂಲಕ ಹಲವು ದೇವಸ್ಥಾನಗಳಲ್ಲಿ ಪೂಜೆ ಪುರಸ್ಕಾರಗಳು ನಿಯಮಿತವಾಗಿ ನಡೆಯುವಂತೆ ನೋಡಿಕೊಂಡಿದ್ದರು. ಕೋವಿಡ್ ಸಂದರ್ಭ, ಭಟ್ಕಳದಲ್ಲಿ ನೆರೆ ನೀರು ತುಂಬಿ ಹಾನಿಯಾದಾಗ ಸಮಾಜ ಬಾಂಧವರಿಗೆ ತನ್ನದೇ ಶೈಲಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದರು.
ಇದನ್ನೂ ಓದಿ : ಅಡಿಕೆ ಕದ್ದ ಕಳ್ಳರ ಬಂಧನ; ಕಾರು, ಬೈಕ್ ವಶಕ್ಕೆ
ಬೆಳಿಗ್ಗೆ ತಾಲೂಕಿನ ಹಲ್ಯಾಣಿಯಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ವಿವಿ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ನಗರದ ಮಣ್ಕುಳಿಯಲ್ಲಿರುವ ಮುಕ್ತಿಧಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು, ಅವರ ಹಿತೈಷಿಗಳು, ಅಭಿಮಾನಿಗಳು ಸೇರಿದಂತೆ ಹಲವಾರು ಜನರು ಅವರ ಅಂತಿಮ ದರ್ಶನ ಪಡೆದರು (Subray Kamath died ).
ಇದನ್ನೂ ಓದಿ : ಸಿ ವಾಕ್ ಬಳಿ ಸಿಲುಕಿದ ಬೋಟ್
ಸುಬ್ರಾಯ ಕಾಮತ ನಿಧನದ ಸುದ್ದಿ ತಿಳಿಯುತ್ತಿರುವಂತೆ ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಸುನೀಲ ನಾಯ್ಕ, ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಹಾಂಗ್ಯೋ ಐಸ್ಕ್ರೀಮ್ ಸಂಸ್ಥೆಯ ದಿನೇಶ ಪೈ, ಸತೀಶ ಪೈ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಹೂವು ಮಾರಾಟಗಾರರು, ವರ್ತಕ ಸಂಘದ ಪದಾಧಿಕಾರಿಗಳು ಸೇರಿ ಇತರ ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ಇದನ್ನೂ ಓದಿ : ಸತ್ತ ಹುಂಜ ವಶಕ್ಕೆ ಪಡೆದ ಪೊಲೀಸರು !