ಭಟ್ಕಳ : ಜನನಿಬಿಡ ಸ್ಥಳದಲ್ಲಿ ಕಳೆದ ಎರಡ್ಮೂರು ತಿಂಗಳಿಂದ‌ ಶಂಕಾಸ್ಪದ ಕಾರು(Suspected Car) ನಿಂತುಕೊಂಡಿದ್ದು, ಜನರಲ್ಲಿ ಆತಂಕ(anxiety) ಮನೆಮಾಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಭಟ್ಕಳ(Bhatkal) ಬಸ್ ನಿಲ್ದಾಣದ ಎದುರಿನ‌ ಟ್ಯಾಕ್ಸಿ ನಿಲ್ದಾಣದ ಹಿಂಭಾಗ ಈ ಕಾರು ನಿಂತುಕೊಂಡಿದೆ. ಹುಂಡೈ ಕಂಪನಿಯ ಬೆಳ್ಳಿ(silver) ಬಣ್ಣದ ಸ್ಯಾಂಟ್ರೊ (santro) ಕಾರು ಇದಾಗಿದೆ. ಮಳೆಗಾಲಕ್ಕೂ ಮುನ್ನ ಈ ಶಂಕಾಸ್ಪದ ಕಾರು(Suspected Car) ನಿಂತುಕೊಂಡಿದ್ದು, ಈವರೆಗೆ ಅಲ್ಲಿಂದ ಜಾಗದಿಂದ ಕದಲಿಲ್ಲ. ಭೀಕರ ಮಳೆಯಲ್ಲೂ ಕಾರನ್ನು ಮಾಲೀಕರು ತೆಗೆದುಕೊಂಡು ಹೋಗದಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿದೆ.

ಇದನ್ನು ಓದಿ : ಜುಲೈ ೨೨ರಂದು ವಿವಿಧೆಡೆ ಅಡಿಕೆ ಧಾರಣೆ

ಕೆಎ-೦೫, ಝಡ್-೬೧೮ ನೋಂದಣಿ ಸಂಖ್ಯೆಯ ಕಾರಿನ ಬಗ್ಗೆ ಆ್ಯಪ್ ನಲ್ಲಿ ಪರಿಶೀಲಿಸಿದಾಗ ಮಾಲೀಕರ ಹೆಸರು ಉದಯ ನಾಯ್ಕ ಎಂದು ನಮೂದಿಸಲಾಗಿದೆ. ಇದರ ವಿಮೆ ಅವಧಿ ಮುಗಿದಿದೆ. ಈ ಕಾರು ಇಲ್ಲಿಗೆ ಹೇಗೆ ಬಂತು? ಯಾಕೆ ಇಲ್ಲಿಟ್ಟಿದ್ದಾರೆ? ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕಾರು ಕದ್ದು ತಂದಿಟ್ಟಿದ್ದಾ? ಕಾನೂನು ಬಾಹಿರ ಚಟುವಟಿಕೆಗೆ ಬಳಸಿ ಬಿಟ್ಟು ಹೋಗಿದ್ದಾರಾ? ಎಂಬ ಪ್ರಶ್ನೆ ಸ್ಥಳೀಯರಲ್ಲಿ ಎದ್ದಿದೆ. ಪೊಲೀಸ್ ತನಿಖೆಯಿಂದಲೇ ಎಲ್ಲ ಗೊಂದಲಗಳಿಗೆ ಉತ್ತರ ಸಿಗಬೇಕಿದೆ.

ಇದನ್ನೂ ಓದಿ : ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ