ಭಟ್ಕಳ (Bhatkal): ರಾಜ್ಯ ಮಾಹಿತಿ ಹಕ್ಕು (RTI) ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ (uttarakannada) ಹಾಗೂ ಭಟ್ಕಳ ಘಟಕ ವತಿಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಿಲ್ಲಿಸುವಂತೆ ತಾಲೂಕಾಡಗಳಿತದಿಂದ (Tahasildar ) ಧರಣಿ ಸ್ಥಳದ ಬಳಿ ನೋಟಿಸ್(notice issued) ಅಂಟಿಸಿ ತೆರಳಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸ್ಥಳೀಯ ಪ್ರಾಧಿಕಾರ ಹಾಗೂ ಆರಕ್ಷಕ ಇಲಾಖೆಯಿಂದ ಅನುಮತಿ ಪಡೆಯದೇ ಧರಣಿ ನಡೆಸುತ್ತಿರುವುದು ಕಾನೂನಾತ್ಮಕವಾಗಿರುವುದಿಲ್ಲ. ಭಟ್ಕಳ ತಾಲೂಕು ಮತೀಯ ದೃಷ್ಟಿಯಿಂದ ಅತೀಸೂಕ್ಷ್ಮ ಪ್ರದೇಶವಾಗಿರುವುದರಿಂದ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುತ್ತದೆ ಎಂದು ನೋಟೀಸಿನಲ್ಲಿ ಎಚ್ಚರಿಸಲಾಗಿದೆ. ಕಾರಣ ಧರಣಿಯನ್ನು ಮುಕ್ತಾಯಗೊಳಿಸುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.
ದಿನಾಂಕ ೨೦-೯-೨೦ ರಂದು ಬೆಳಿಗ್ಗೆ ೧೧ ಗಂಟೆಯಿಂದ ತಾಲೂಕಾ ಆಡಳಿತ ಸೌಧದ ಧ್ವಜದ ಕಟ್ಟೆಯ ಎದುರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ (satyagraha) ಹಮ್ಮಿಕೊಳ್ಳುವುದಾಗಿ ತಹಶೀಲ್ದಾರ ಕಚೇರಿಗೆ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ಮನವಿ ಸಲ್ಲಿಸಲಾಗಿತ್ತು. ಅದರ ಹಿನ್ನೆಲೆ ಭಟ್ಕಳ ತಾಲೂಕಿನಲ್ಲಿ ಪ್ರತಿಭಟನೆ ಮತ್ತು ಧರಣಿ ಇತ್ಯಾದಿ ನಡೆಸಲು ಭಟ್ಕಳ ತಾಲೂಕಿನ ಹಳೆ ತಹಶೀಲ್ದಾರ ಕಚೇರಿ ಪಕ್ಕದಲಿರುವ ಸೂಸಗಡಿ ಗ್ರಾಮದ ಸ.ನಂ.೫೭೩ಬ ಕ್ಷೇತ್ರ ೦-೧೦-೦ ಸ್ಥಳವನ್ನು ನಿಗದಿ ಪಡಿಸಿ ಅಧಿಸೂಚನೆ ಹೊರಡಿಸಿದ ಬಗ್ಗೆ ಕಚೇರಿಯಿಂದ ಮಾಹಿತಿಯನ್ನು ನೀಡಲಾಗಿರುತ್ತದೆಯೇ ಹೊರತು ಧರಣಿಯನ್ನು ನಡೆಸಲು ಕಚೇರಿಯಿಂದ ಅನುಮತಿ ನೀಡಿಲ್ಲ ಎಂದು ನೋಟೀಸಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಭಟ್ಕಳದ ರಾಹಿಕ್ ಸಹಿತ ಇಬ್ಬರ ಬಂಧನ
ನಿಮ್ಮ ಬೇಡಿಕೆ ಬಗ್ಗೆ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಸದರಿ ಬೇಡಿಕೆಗಳು ಸರ್ಕಾರದ ಹಂತದಲ್ಲಿ ಕ್ರಮವಹಿಸಬೇಕಾಗುತ್ತದೆ ಎಂದೂ ನೋಟೀಸಿನಲ್ಲಿ ತಿಳಿಸಲಾಗಿದೆ. ತಹಶೀಲ್ದಾರ ಸಹಿ ಇರುವ ಈ ನೋಟೀಸನ್ನು ಕಚೇರಿ ಸಿಬ್ಬಂದಿ ಪ್ರತಿಭಟನಾ ಸ್ಥಳದ ಬಳಿ ಅಂಟಿಸಿ ತೆರಳಿದ್ದಾರೆ (notice issued).
ಈ ಸುದ್ದಿಗೆ ಸಂಬಂಧಿಸಿದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ವಿಡಿಯೋ ಸಹಿತ ಇದನ್ನೂ ಓದಿ : ಸಹಾಯಕ ಆಯುಕ್ತರ ಮನವಿಗೆ ಜಗ್ಗದ ಪ್ರತಿಭಟನಾಕಾರರು