ಭಟ್ಕಳ (Bhatkal): ಇಸ್ಲಾಂ (Islam) ಧರ್ಮದ ಸಂಸ್ಥಾಪಕ ಮಹ್ಮದ್ ಪೈಗಂಬರ್ (prophet Muhammed) ವಿರುದ್ಧ ಉತ್ತರ ಪ್ರದೇಶದ (Uttara Pradesh) ದಾಸ್ನಾ ದೇವಿ ದೇವಸ್ಥಾನದ ಪೀಠಾಧಿಪತಿ ಯತಿ ನರಸಿಂಹಾನಂದ ಸ್ವಾಮೀಜಿ ಹೇಳಿಕೆ ಖಂಡಿಸಿ ಭಟ್ಕಳ ತಂಜೀಮ್ (Tanzeem) ವತಿಯಿಂದ ಅ.೧೫ ರಂದು “ಭಟ್ಕಳ ಬಂದ್” ಗೆ ಕರೆ ನೀಡಲಾಗಿದೆ ಎಂದು ತಂಜೀಮ್ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ತಿಳಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಅ.೧೪ರಂದು ಸೋಮವಾರ ಇಸ್ಲಾಂ ಧರ್ಮದ ಸಂಸ್ಥಾಪಕ ಮಹ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಲು ಶಹರ ಠಾಣೆಯಲ್ಲಿ ದೂರು ದಾಖಲಿಸಲಾಗುವುದು. ಬಳಿಕ ಸಂಜೆ ೪.೩೦ಕ್ಕೆ ಭಟ್ಕಳ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ೨೦ ಕೆ.ಜಿ. ಕಡವೆ ಮಾಂಸ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು
ಅ.೧೫ ಮಂಗಳವಾರ ಎಲ್ಲಾ ಅಂಗಡಿಗಳು, ವ್ಯಾಪಾರ, ಕಚೇರಿಗಳು, ಶಾಲೆ- ಕಾಲೇಜುಗಳು, ಧಾರ್ಮಿಕ ಶಿಕ್ಷಣ ಕೇಂದ್ರಗಳು, ಆಟೋ, ಟೆಂಪೊ, ಹೋಟೆಲ್‌ಗಳು ಹಾಗೂ ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಮಾಂಸ, ಮೀನು, ಹಾಲು, ತರಕಾರಿ, ಹಣ್ಣುಗಳ ಖರೀದಿ-ಮಾರಾಟ ಕೂಡ ಬಂದ್‌ನ ವ್ಯಾಪ್ತಿಗೆ ಒಳಪಡಲಿದೆ. ಸಾರ್ವಜನಿಕರು ಈ ಬಂದ್‌ನಲ್ಲಿ ಭಾಗವಹಿಸಿ ಪ್ರವಾದಿ ಮುಹಮ್ಮದ್ ಪೈಗಂಬರರ ವಿರುದ್ಧ ಮಾಡುತ್ತಿರುವ ಅವಮಾನವನ್ನು ಖಂಡಿಸುವಂತೆ ತಂಜೀಮ್ (Tanzeem) ಇನಾಯತುಲ್ಲಾ ಶಾಬಂದ್ರಿ ವಿನಂತಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳರ ಪಾಲು