ಭಟ್ಕಳ(Bhatkal): ಪ್ರವಾದಿ ಮುಹಮ್ಮದ್ (prophet Muhammed) ಪೈಗಂಬರರನ್ನು ಅತ್ಯಂತ ಅಸಭ್ಯವಾಗಿ ನಿಂದಿಸಿದ ಯತಿ ನರಸಿಂಹಾನಂದ ಸರಸ್ವತಿ ಸ್ವಾಮೀಜಿಯವರನ್ನು ದೇಶದ್ರೋಹದ ಪ್ರಕರಣದಡಿ ಬಂಧಿಸುವಂತೆ ಆಗ್ರಹಿಸಿ ಭಟ್ಕಳದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಂಜೀಮ್ (Tanzeem demands) ನೇತೃತ್ವದಲ್ಲಿ ಸಹಾಯಕ ಆಯುಕ್ತರ ಮೂಲಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಮನವಿ ಪತ್ರ ಕಳುಹಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳದ ಜಾಮಿಯಾ ಮಸೀದಿ ಖತೀಬ್ ಮತ್ತು ಇಮಾಮ್ ಮೌಲಾನಾ ಅಬ್ದುಲ್ ಅಲೀಮ್ ಕತೀಬ್ ನದ್ವಿ, ಪ್ರವಾದಿ ಮುಹಮ್ಮದ್ (ಸ)ರ ವಿರೋಧಿ ಕೇವಲ ಮುಸ್ಲಿಮರ ವಿರೋಧಿಯಲ್ಲ. ಆತ ಹಿಂದೂ ವಿರೋಧಿಯೂ ಆಗಿದ್ದಾನೆ. ಈ ದೇಶದ ವಿರೋಧಿಯೋ ಆಗಿದ್ದಾನೆ. ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತು ಎಲ್ಲ ಧರ್ಮದ ಧಾರ್ಮಿಕ ಪುಸ್ತಕಗಳಲ್ಲಿ ಅವರನ್ನು ದೇವನ ಸಂದೇಶವಾಹಕರೆಂದು ಕರೆದಿವೆ. ನಮ್ಮ ದೇಶ ಎಲ್ಲ ಧರ್ಮ, ಜಾತಿ ಜನಾಂಗವನ್ನು ಸಮಾನವಾಗಿ ಕಾಣುತ್ತದೆ. ಇಂತಹ ದೇಶದಲ್ಲಿರುವ ಸ್ವಾಮೀಜಿ ಇಡೀ ದೇಶಕ್ಕೆ ದ್ರೋಹ ಎಸಗಿದ್ದಾರೆ. ಇವರ ಬಂಧನಕ್ಕೆ ಕೇವಲ ಮಸ್ಲಿಮರಷ್ಟೇ ಅಲ್ಲ, ಹಿಂದೂಗಳು ಕೂಡ ಆಗ್ರಹಿಸಬೇಕು ಎಂದರು.

ಇದನ್ನೂ ಓದಿ : ಉತ್ತರ ಪ್ರದೇಶ ಸ್ವಾಮೀಜಿ ವಿರುದ್ಧ ಭಟ್ಕಳದಲ್ಲಿ ದೂರು

ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಮಾತನಾಡಿ, ಪ್ರವಾದಿ ಮುಹಮ್ಮದ್ ರನ್ನು ನಿಂದಿಸುವುದರಿಂದ ಒಂದು ಸಮಾಜಕ್ಕೆ ನಷ್ಟ ಆಗುವುದಿಲ್ಲ. ಬದಲಾಗಿ ಈ ದೇಶದ ಭದ್ರತೆ ಮತ್ತು ಅಖಂಡತೆಗೆ ಮಾರಕ. ಇವರ ವಿರುದ್ಧ ಇನ್ನು ಮುಂದೇ ಯಾವುದೇ ಧಾರ್ಮಿಕ ವ್ಯಕ್ತಿಗಳ ವಿರುದ್ಧ ನಿಂದನೆ ಮಾಡದ ರೀತಿಯಲ್ಲಿ ಕಠಿಣ ಶಿಕ್ಷೆ ನೀಡಬೇಕು ಎಂದು ನಮ್ಮ ಆಗ್ರಹವಾಗಿದೆ ಎಂದರು.

ಇದನ್ನೂ ಓದಿ : ತಾಲೂಕು ಸೌಧದೆದುರು ಪ್ರತಿಭಟನೆ; ಮೆರವಣಿಗೆಯಿಲ್ಲ

ತಂಜೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮನವಿ ಸಲ್ಲಿಸಿ ಮಾತನಾಡಿ, ಪ್ರವಾದಿ ಮುಹಮ್ಮದರು ಇಡೀ ಮನುಷ್ಯರ ಮಾರ್ಗದರ್ಶನಕ್ಕಾಗಿ ಬಂದಿದ್ದರು. ಅವರನ್ನು ನಿಂದಿಸುವುದು ಎಂದರೆ ಇಡೀ ಮನುಷ್ಯರನ್ನು ನಿಂದಿಸಿದಂತೆ. ಇವರನ್ನು ಬಂಧಿಸದೇ ಇದ್ದರೆ ನಾವು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರವಾರ ಚಲೋ ನಡೆಸಬೇಕಾಗುತ್ತದೆ (Tanzeem demands) ಎಂದರು‌.

ಇದನ್ನೂ ಓದಿ :  ‘ಭಟ್ಕಳ ಬಂದ್’ ಕರೆಕೊಟ್ಟ ತಂಜೀಮ್

ತಂಜೀಮ್ ರಾಜಕೀಯ ಸಮಿತಿ ಸಂಚಾಲಕ ಇಮ್ರಾನ್ ಲಂಕಾ ಮನವಿ ಪತ್ರ ಓದಿದರು. ಸಹಾಯಕ ಆಯುಕ್ತ ಡಾ. ನಯನ ಎಂ. ಮನವಿ ಪತ್ರ ಸ್ವೀಕರಿಸಿ, ಮನವಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಂಜೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಭಟ್ಕಳ ಮುಸ್ಲಿಮ್ ಯುತ್ ಫಡರೇಶನ್ ಮಾಜಿ ಅಧ್ಯಕ್ಷ ಅಝೀಝುರ್ರಹ್ಮಾನ್ ನದ್ವಿ, ಪ್ರಧಾನ ಕಾರ್ಯದರ್ಶಿ ಮುಬಶೀರ್ ಹಲ್ಲಾರೆ ಸೇರಿದಂತೆ ವಿವಿಧ ಜಮಾತ್ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.