ಭಟ್ಕಳ(Bhatkal): ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳ ಟ್ಯಾಕ್ಸಿ ಚಾಲಕ-ಮಾಲಕ ಸಂಘದವರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ (parking space) ಮಾಡಿಕೊಡುವ ಬಗ್ಗೆ ಭಟ್ಕಳ ಡಿವೈಎಸ್ಪಿಗೆ ಗುರುವಾರದಂದು ಮನವಿ ಸಲ್ಲಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಳೆದ ೪೦ ವರ್ಷಗಳಿಂದ ಭಟ್ಕಳದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದಲ್ಲಿ ಬಾಡಿಗೆ ಕಾರುಗಳನ್ನು ನಂಬಿ ಆ ವೃತ್ತಿಯನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡವರಿದ್ದಾರೆ. ಸುಮಾರು ೨೫೦ ರಿಂದ ೨೬೦ ಟೂರಿಸ್ಟ್ ಗಾಡಿಯ ಚಾಲಕರು ಮತ್ತು ಮಾಲಕರು ಸರಕಾರಕ್ಕೆ ಬಾಡಿಗೆ ತೆರಿಗೆಯನ್ನು ಕಟ್ಟಿಕೊಂಡು ಜೀವನ ಮಾಡಿಕೊಂಡಿರುತ್ತಾರೆ. ಆದರೆ ಈಗ ಹೆದ್ದಾರಿ ಅಗಲೀಕರಣದಿಂದಾಗಿ ನಮಗೆ ಬಾಡಿಗೆ ಕಾರುಗಳನ್ನು ಪಾರ್ಕಿಂಗ್ ಮಾಡಲು ಸಮಸ್ಯೆ ಉಂಟಾಗಿರುತ್ತದೆ. ಈ ಹಿಂದೆ ಸುಮಾರು ಎರಡು ಮೂರು ಬಾರಿ ಗಮನಕ್ಕೆ ತಂದರೂ ಇಲ್ಲಿಯವರೆಗೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನಾಗಲೀ ಅಥವಾ ಯಾವುದೇ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಲು ಬಂದಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಯುವತಿಯೊಂದಿಗೆ ಭಟ್ಕಳದ ಯುವಕನ ಅನುಚಿತ ವರ್ತನೆ
ಬಸ್ ನಿಲ್ದಾಣದ ಎದುರುಗಡೆಯೇ ಬಾಡಿಗೆ ಕಾರು ಪಾರ್ಕಿಂಗ್ ಇದ್ದರೆ ಹಿರಿಯ ನಾಗರಿಕರಿಗೆ, ರೋಗಿಗಳಿಗೆ ಹಾಗೂ ಹೊರ ರಾಜ್ಯದಿಂದ ಬರುವಂತಹ ಪ್ರಯಾಣಿಕರುಗಳಿಗೆ ಅನುಕೂಲವಾಗುತ್ತದೆ. ಬಾಡಿಗೆಯನ್ನೇ ನಂಬಿಕೊಂಡು ಬಂದಿರುವಂತಹ ನಮಗೆ ಬಸ್ ನಿಲ್ದಾಣದ ಮುಂಭಾಗದಲ್ಲಿಯೇ ಕಾರು ಪಾರ್ಕಿಂಗ್ ಮಾಡಲು ಅವಕಾಶ (parking space) ಮಾಡಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಇದನ್ನೂ ಓದಿ : ಎರಡು ಚಿನ್ನದ ಪದಕ ಪಡೆದ ಭಟ್ಕಳದ ಪೋರಿ
ಮನವಿ ಸ್ವೀಕರಿಸಿದ ಡಿವೈಎಸ್ಪಿ ಮಹೇಶ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಣೇಶ ದೇವಾಡಿಗ, ಕಾರ್ಯದರ್ಶಿ ಸೂರ್ಯಕಾಂತ ನಾಯಕ, ನಾರಾಯಣ ನಾಯಕ, ಇಲ್ಯಾಸ್ ಎಸ್. ಬಿ., ಅಬು ಮೊಹಮ್ಮದ, ಶ್ರೀನಿವಾಸ ಉಪಸ್ಥಿತರಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : ಗರ್ಭಿಣಿಯ ಗರ್ಭಕೋಶದಲ್ಲಿ ಮಲಮತ್ತ; ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ