ಭಟ್ಕಳ (Bhatkal): ಯಾರೋ ಕಳ್ಳರು ದೇವಸ್ಥಾನವೊಂದರ ಬಾಗಿಲು ಮುರಿದು ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕದ್ದು ಪರಾರಿಯಾಗಿರುವ ಘಟನೆ (temple theft) ಮುಟ್ಟಳ್ಳಿ ಪಂಚಾಯತ ವ್ಯಾಪ್ತಿಯ ಬೇಹಳ್ಳಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶನಿವಾರ ಮಧ್ಯಾಹ್ನ ೧೨.೩೦ ರಿಂದ ರವಿವಾರ ೮.೩೦ ರ ನಡುವಿನ ಅವಧಿಯಲ್ಲಿ ಬೇಹಳ್ಳಿ ಗ್ರಾಮದ ಕಾನಕೆರೆ ಜಟಕೇಶ್ವರ ದೇವಸ್ಥಾನದ ಒಳ ಹೊಕ್ಕು ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಒಡೆಯಲಾಗಿದೆ. ಅದರಲ್ಲಿದ್ದ ಸುಮಾರು ೪ ಸಾವಿರ ನಗದು ಹಣ ಹಾಗೂ ದೇವಸ್ಥಾನಕ್ಕೆ ಅಳವಡಿಸಿದ್ದ ೧೦ ಸಾವಿರ ರೂ. ಮೌಲ್ಯದ ೬ ಹಿತ್ತಾಳೆ ಗಂಟೆ. ಹೀಗೆ ಒಟ್ಟು ೧೪,೦೦೦ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ (temple theft).
ಇದನ್ನೂ ಓದಿ : ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ (case registered) ಪಿಎಸ್ಐ ಭರಮಪ್ಪ ಬೆಳಗಲಿ ತನಿಖೆ ಕೈಗೊಂಡಿದ್ದಾರೆ.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ರೀಲ್ ನಲ್ಲಿ ವೀಕ್ಷಿಸಬಹುದು.
ವಿಡಿಯೋ ಸಹಿತ ಇದನ್ನೂ ಓದಿ : ಸಮುದ್ರ ಪಾಲಾಗುತ್ತಿದ್ದ ಯುವಕನ ರಕ್ಷಣೆ