ಭಟ್ಕಳ : ಅರಣ್ಯವಾಸಿಗಳಿಂದ ಹಮ್ಮಿಕೊಂಡ ದಶ ಲಕ್ಷ ಗಿಡ ನೆಡುವ(planting) ಅಭಿಯಾನವು ನಿಸರ್ಗದಲ್ಲಿ ಹಸಿರು ಮತ್ತು ಪರಿಸರ ಜಾಗೃತಿಗೆ ಪೂರಕವಾಗಲಿ. ಈ ದಿಸೆಯಲ್ಲಿ ಕಾರ್ಯಕ್ರಮ ಯಶಸ್ಸಾಗಲಿ ಎಂದು ರಾಮ ಕ್ಷೇತ್ರ ಮಹಾ ಸಂಸ್ಥಾನದ ಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಅವರು ಇಂದು ರವಿವಾರ (ಆ.೧೧) ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಭಟ್ಕಳ ತಾಲೂಕಿನ ಕರಿಕಲ್ ಶಾಖಾ ಮಠದ ಆವರಣದಲ್ಲಿ ದಶ ಲಕ್ಷ ಗಿಡ ನೆಡುವ (planting) ಅಭಿಯಾನದ ಅಂಗವಾಗಿ, ಗಿಡಕ್ಕೆ ನೀರು ಎರೆಯುವುದರೊಂದಿಗೆ ಆಶೀರ್ವದಿಸಿದರು.

ಇದನ್ನೂ ಓದಿ : ‘ಅರಣ್ಯ ಸಚಿವರ ಟಿಪ್ಪಣಿಯಿಂದ ಕಾನೂನು ಉಲ್ಲಂಘನೆ’

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ರಾಜ್ಯಾದ್ಯಂತ ಅರಣ್ಯವಾಸಿಗಳಿಂದ ದಶ ಲಕ್ಷ ಗಿಡ ನೆಡುವ ಕಾರ‍್ಯಕ್ರಮ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. ಪರಿಸರ ಪೂರಕ ಕಾರ‍್ಯಕ್ರಮವನ್ನು ಹಮ್ಮಿಕೊಂಡ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರನ್ನು ಅರಣ್ಯವಾಸಿಗಳ ಪರವಾಗಿ ಶ್ರೀಗಳು ಅಭಿನಂದಿಸಿದರು.

ಇದನ್ನೂ ಓದಿ :  ನೂತನ ಪದಾಧಿಕಾರಿಗಳ ನೇಮಕ

ಕಾರ‍್ಯಕ್ರಮದಲ್ಲಿ ವಿವಿಧ ತಾಲೂಕಿನ ಅಧ್ಯಕ್ಷರಾದ ಭೀಮಸಿ ವಾಲ್ಮೀಕಿ ಯಲ್ಲಾಪುರ, ಶಿವಾನಂದ ಜೋಗಿ ಮುಂಡಗೋಡ, ರಾಜೇಶ ಮಿತ್ರ ನಾಯ್ಕ ಅಂಕೋಲ, ರಾಜು ಹರಿಕಾಂತ ಅಂಕೋಲ, ಪಾಂಡು ನಾಯ್ಕ ಬೆಳಕೆ, ದೇವರಾಜ ಗೊಂಡ, ರಾಮು ಮರಾಠಿ, ವಿನೋದ ನಾಯ್ಕ ಯಲ್ಕೊಡಗಿ, ಮಂಜುನಾಥ ಮರಾಠಿ ಭಟ್ಕಳ ಮುಂತಾದವರು ಉಪಸ್ಥಿತರಿದ್ದರು.