ಯಲ್ಲಾಪುರ (ಯಲ್ಲಾಪುರ) : ತರಕಾರಿ ತುಂಬಿಕೊಂಡು ಕುಮಟಾಕ್ಕೆ (Kumta) ಬರುತ್ತಿದ್ದ ಮಿನಿ ಲಾರಿ ಪಲ್ಟಿಯಾಗಿ (terrible accident) ಒಂಭತ್ತು ಜನ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಅರಬೈಲ್ ಘಟದಲ್ಲಿ (Arabail Ghat) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಯಲ್ಲಾಪುರ ತಾಲೂಕಿನ ಗುಳ್ಳಾಪುರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಈ ದುರ್ಘಟನೆ (terrible accident) ನಡೆದಿದೆ. ಘಟನೆಯಲ್ಲಿ ೧೬ ಜನರು ಗಾಯಗೊಂಡಿದ್ದಾರೆ. ಅವರನ್ನು ಯಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ : ಐದು ದಿನಗಳಾದರೂ ಮನೆಗೆ ಬಾರದ ಯುವತಿ
ಮೃತ ದೇಹಗಳನ್ನು ಯಲ್ಲಾಪುರ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಹಾವೇರಿ (Haveri) ಜಿಲ್ಲೆಯ ಸವಣೂರಿನಿಂದ (Savanur) ತರಕಾರಿಗಳನ್ನು ಹೊತ್ತುಕೊಂಡು ಲಾರಿಯು ಕುಮಟಾದ ಸಂತೆಗೆ ಬರುತ್ತಿತ್ತು ಎಂದು ತಿಳಿದು ಬಂದಿದೆ.
ಇದನ್ನು ಓದಿ : ಕಾರು ಡಿಕ್ಕಿಯಾಗಿ ಯುವತಿ ಸ್ಥಳದಲ್ಲಿಯೇ ಸಾವು
ಲಾರಿಯಲ್ಲಿ ತರಕಾರಿ ಮೂಟೆಗಳ ಮೇಲೆ ಕುಳಿತು 40 ರಷ್ಟು ತರಕಾರಿ ವ್ಯಾಪಾರಿಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅಪಘಾತದ ರಭಸಕ್ಕೆ ಲಾರಿ ನಜ್ಜುಗುಜ್ಜಾಗಿದೆ. ಸರಕಾರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಸಂಪೂರ್ಣ ನಷ್ಟವಾಗಿದೆ.
ಇದನ್ನು ಓದಿ : ಪೊಲೀಸರ ವಿರುದ್ಧ ಆಟೋ ಚಾಲಕರ ದಿಢೀರ್ ಪ್ರತಿಭಟನೆ