ಭಟ್ಕಳ (Bhatkal): ಬಾಣಂತನಕ್ಕೆಂದು ತಾಯಿಯ ಮನೆಗೆ ಹೋದ ವೇಳೆ ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿರುವ ಘಟನೆ (house theft) ತಾಲೂಕಿನ ಶಿರಾಲಿ ಗುಮ್ಮನಹಕ್ಲುವಿನಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಂಜುನಾಥ ಮಾಸ್ತಪ್ಪ ನಾಯ್ಕ ಎನ್ನುವವರಿಗೆ ಸೇರಿದ ಮನೆ ಇದಾಗಿದೆ. ಇವರ ಪತ್ನಿ ಕಳೆದ 20 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಮುರುಡೇಶ್ವರದ (Murudeshwar) ತಾಯಿಯ ಮನೆಯಲ್ಲಿ ಇದ್ದರು. ಆದರೆ ಮಂಜುನಾಥ ನಾಯ್ಕ ಮನೆಯಲ್ಲಿಯೇ ಇರುತ್ತಿದ್ದರು. ಆದರೆ, ಅವರು ಜೂನ್ ೨೩ರ ಸೋಮವಾರ ರಾತ್ರಿ ಮುರುಡೇಶ್ವರದಲ್ಲಿರುವ (Murdeshwar) ತನ್ನ ಹೆಂಡತಿಯ ಮನೆಗೆ ತೆರಳಿದ್ದರು.

ಇದನ್ನು ಓದಿ: AITM/ ಎಐಟಿಎಂದಲ್ಲಿ 42ನೇ ಪದವಿ ಪ್ರದಾನ ದಿನ

ಸೋಮವಾರ ರಾತ್ರಿ ೧೧.೩೦ರಿಂದ ಮರುದಿನ ಬೆಳಗಿನ ಜಾವ ೫.೧೫ರ ನಡುವಿನ ಅವಧಿಯಲ್ಲಿ ಮನೆಯ ಮುಂದಿನ ಬಾಗಿಲಿನ ಚಿಲಕವನ್ನು ಮುರಿದು ಮನೆಯ ಮನೆಗೆ ನುಗ್ಗಿದ ಕಳ್ಳರು ಮನೆಯ ಬೆಡ್ ರೂಮ್ ಕೋಣೆಯ ಕಪಾಟಿನ ಬಾಗಿಲನ್ನು ಮುರಿದು ಕಪಾಟಿನಲ್ಲಿದ್ದ ಇದ್ದ ಒಟ್ಟು ೪೬೬ ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ಒಟ್ಟೂ ೧೫ ಗ್ರಾಂ ಬೆಳ್ಳಿಯ ಆಭರಣಗಳನ್ನು ಮತ್ತು ೨.೫೦ ಲಕ್ಷ ರೂ ನಗದು ಕಳ್ಳತನ ಮಾಡಿದ್ದಾರೆ.

ಇದನ್ನು ಓದಿ: dress code/ ಅರೆಬರೆ ಬಟ್ಟೆ ಧರಿಸಿದರೆ ಪ್ರವೇಶವಿಲ್ಲ !

ಒಟ್ಟು 20,71,500 ರೂ. ಮೌಲ್ಯದ ವಸ್ತುಗಳು ಕಳ್ಳತನ ವಾಗಿರುವ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಮನೆಯ ಮಾಲೀಕ ಮಂಜುನಾಥ ಮಾಸ್ತಪ್ಪ ನಾಯ್ಕ ದೂರು ನೀಡಿದ್ದಾರೆ (complaint filed).

ಇದನ್ನು ಓದಿ: Landslide threat/ ಗುಡ್ಡದ ಅಂಚಿನಲ್ಲಿರುವ ಎಂಟು ಕುಟುಂಬಗಳಿಗೆ ನೋಟಿಸ್ ಜಾರಿ