ಭಟ್ಕಳ (Bhatkal): ನೂಲು ಹುಣ್ಣಿಮೆಯಂದು ಆಚರಿಸುವ ಯಜ್ಞೋಪವಿತ ಧಾರಣೆ ಕಾರ್ಯಕ್ರಮವನ್ನು (thread ceremony) ಭಟ್ಕಳದ ನೆಹರು ರಸ್ತೆಯಲ್ಲಿರುವ ಶ್ರೀ ಕಾಮಾಕ್ಷಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪಟ್ಟಣದ ನೆಹರೂ ರಸ್ತೆಯಲ್ಲಿರುವ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗಿನ ಜಾವವೇ ಯಜ್ಞೋಪವೀತ ಧಾರಣೆಯ ವಿಧಿವಿಧಾನಗಳು ವೇ.ಮೂ. ವಿನೋದ ಭಟ್ ನೇತೃತ್ವದಲ್ಲಿ ಆರಂಭಗೊಂಡಿತು. ಹೋಮ-ಹವನದಲ್ಲಿ ಸ್ಥಳೀಯರು ಭಾಗಿಯಾಗಿದ್ದರು. ವೈದಿಕರು ಯಜ್ಞೋಪವೀತ ಧಾರಣೆ ಮಾಡಿಸಿದರು. ನಾಗೇಶ ಪುರಾಣಿಕ, ವಿನಾಯಕ ಭಟ್ ಸಹಕರಿಸಿದರು.
ಇದನ್ನೂ ಓದಿ : ಕಾರು ಡಿಕ್ಕಿಯಾಗಿ ವೃದ್ಧೆಗೆ ಗಾಯ
ಬ್ರಹ್ಮಚಾರಿ ವಟುಗಳಾದ ಶಾಂತಕೃಷ್ಣ ಭಟ್, ಪ್ರತೀತ ಕಿಣಿ, ಶಶಾಂಕ ಶ್ಯಾನಭಾಗ ಹವನದ ಅಗ್ನಿ ಕಾರ್ಯದಲ್ಲಿ ಪಾಲ್ಗೊಂಡು ಯಜ್ಞೋಪವೀತ ಧಾರಣೆ ಮಾಡಿದರು. ಜನ್ನಾ ಪೈ, ನಾಗೇಶ ಪೈ, ಆನಂದ ಕಿಣಿ, ರಘುವೀರ ಬಾಳಗಿ, ರಾಜಣ್ಣ ಶ್ಯಾನಭಾಗ, ಪುಂಡಲೀಕ ಪೈ, ಸುಧೀಂದ್ರ ಶ್ಯಾನಭಾಗ, ದೇವಸ್ಥಾನದ ಮ್ಯಾನೇಜರ್ ನಂದು ಕಾಮಕರ್ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ : ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಕುಡಿದರೆ ಜೋಕೆ!
ಪಟ್ಟಣದ ವಡೇರ ಮಠ, ಕಾಶಿ ಮಠ, ಮುರ್ಡೇಶ್ವರದ ವೆಂಕಟ್ರಮಣ ದೇವಸ್ಥಾನ ಸೇರಿದಂತೆ ಗ್ರಾಮೀಣ ಭಾಗದ ಹಲವಾರು ದೇವಸ್ಥಾನಗಳಲ್ಲಿ ಯಜ್ಞೋಪವೀತ ಧಾರಣೆ ಮಾಡುವ ಮೂಲಕ ನೂಲು ಹುಣ್ಣಿಮೆ ಹಬ್ಬವನ್ನು ಆಚರಿಸಲಾಯಿತು (thread ceremony).
ಇದನ್ನೂ ಓದಿ : ಜ್ಯೋತಿಷ್ಯ ದೀಪ ಬದುಕಿಗೆ ಮಾರ್ಗದರ್ಶಿ: ರಾಘವೇಶ್ವರ ಶ್ರೀ