ಕಾರವಾರ (Karwar): ತಾಲೂಕಿನ ಹಣಕೋಣ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಮೂವರು ಸುಪಾರಿ ಹಂತಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ (Three arrest).
ಸೆ.೨೨ರಂದು ಮುಂಜಾನೆ ಚಿತ್ತಾಕುಲಾ ಪೊಲೀಸ್ ಠಾಣೆಯ ವ್ಯಾಪ್ತಿಯ ಹಣಕೋಣ ಗ್ರಾಮದ ನಿವಾಸಿಯಾಗಿರುವ ಪುಣೆಯಲ್ಲಿ (Pune) ಉದ್ಯಮಿಯಾಗಿದ್ದ ವಿನಾಯಕ @ ರಾಜು ಕಾಶಿನಾಥ ನಾಯ್ಕ (೫೮) ಅವರ ಹತ್ಯೆಯಾಗಿತ್ತು. ಇವರನ್ನು ಹಣಕೋಣದ ಅವರ ಸ್ವಗೃಹದಲ್ಲಿ ಯಾರೋ ಅಪರಿಚಿತರು ಮಾರಕಾಸ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಈ ಬಗ್ಗೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ : ಲಂಚ ಪಡೆದ ಪಟ್ಟಣ ಪಂಚಾಯತ್ ಸದಸ್ಯಗೆ ಜೈಲು ಶಿಕ್ಷೆ
ಆದರೆ ಅಪರಾಧ ಘಟಿಸಿದ್ದರ ಬಗ್ಗೆ ಯಾವುದೇ ಕುರುಹುಗಳು ಇರಲಿಲ್ಲ. ಕೊಲೆಯಾದ ವ್ಯಕ್ತಿಯ ವ್ಯವಹಾರ, ವೈಯಕ್ತಿಕ ವಿಷಯಕ್ಕೆ ಅಥವಾ ಇನ್ನಾವುದೋ ಕಾರಣಕ್ಕೆ ಕೊಲೆ ನಡೆದಿರಬೇಕೆಂದು ಪೊಲೀಸರು ಶಂಕಿಸಿದ್ದರು. ಕೊಲೆಯಾದ ಕುಟುಂಬದ ಸದಸ್ಸರೊಂದಿಗೆ ಚರ್ಚಿಸಿ, ತಾಂತ್ರಿಕ ಕುರುಹುಗಳ ಜಾಡು ಹಿಡಿದು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಎಸ್ಪಿ ಎಂ. ನಾರಾಯಣ, ಎಎಸ್ಪಿಗಳಾದ ಸಿ.ಟಿ. ಜಯಕುಮಾರ ಮತ್ತು ಜಗದೀಶ ಎಂ. ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಲಾಯಿತು. ಕಾರವಾರ ಡಿವೈಎಸ್ಪಿ ಎಸ್.ವಿ ಗಿರೀಶ ಮೂರು ವಿಶೇಷ ತಂಡಗಳನ್ನು ರಚಿಸಿ ಕಾರ್ಯರೂಪಕ್ಕೆ ಇಳಿಸಿದರು. ಸಿ.ಪಿ.ಐ ಕದ್ರಾ ವೃತ್ತ, ಪಿ.ಐ ಕಾರವಾರ ಗ್ರಾಮೀಣ ಠಾಣೆ ಮತ್ತು ಪಿಐ ಕಾರವಾರ ಶಹರ ಪೊಲೀಸ್ ಠಾಣೆ ನೇತೃತ್ವದ ಮೂರು ಪ್ರತ್ಯೇಕ ತಂಡ ಆರೋಪಿಗಳ ಜಾಡು ಹಿಡಿದು ತನಿಖೆ ಆರಂಭಿಸಿದ್ದರು.
ಇದನ್ನೂ ಓದಿ : Karwar Case/ ಉದ್ಯಮಿ ಕೊಲೆ ಆರೋಪಿ ಶವವಾಗಿ ಪತ್ತೆ
ತನಿಖೆ ನಡೆದಿದ್ದು ಹೇಗೆ?: ಆರಂಭದಲ್ಲಿ ಕಾರವಾರ ನಗರದ ರಸ್ತೆಯ ಎಲ್ಲಾ ಕಡೆಗಳಲ್ಲಿ ಕಾರು ಚಲನವಲನದ ಮಾಹಿತಿಯ ಆಧಾರದ ಮೇಲೆ ಕಾರು ಯಾರದ್ದು, ಎಂಬ ಮಾಹಿತಿಯನ್ನು ಕಲೆ ಹಾಕಲಾಯಿತು. ನಂತರ ಕಾರು ಮಾಲಕ ಹಾಗೂ ಅವರು ಯಾರಿಗೆ ಕಾರನ್ನು ಮಾರಿದ್ದರು ಎಂಬ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡರು. ಹತ್ಯೆಗೆ ಬಳಸಿದ್ದ ಕಾರು ಗೋವಾದಲ್ಲಿ (Goa) ಉದ್ಯಮಿಯಾಗಿರುವ ಗುರುಪ್ರಸಾದ ರಾಣೆ ತನ್ನ ಪರಿಚಯಸ್ಥರಿಂದ ಪಡೆದುಕೊಂಡಿದ್ದನ್ನು ಪೊಲೀಸರು ಖಾತ್ರಿ ಪಡಿಸಿಕೊಂಡರು. ವೈಯಕ್ತಿಕ ವಿಷಯಕ್ಕೆ ಹಣಕೋಣದ ನಿವಾಸಿ ಪುಣಾದಲ್ಲಿ ವ್ಯವಹಾರ ಮಾಡುತ್ತಿರುವ ವಿನಾಯಕ ಕಾಶಿನಾಥ ನಾಯ್ಕ ಇವರನ್ನು ಕೊಲೆ ಮಾಡುವಂತೆ ಆರೋಪಿತರಿಗೆ ಸುಪಾರಿ ನೀಡಲಾಗಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : ಕಾರವಾರದಲ್ಲಿ ಪುಣೆ ಉದ್ಯಮಿಯ ಭೀಕರ ಕೊಲೆ
ದೆಹಲಿಯಲ್ಲಿ ಆರೋಪಿಗಳ ಬಂಧನ : ಸಿ.ಪಿ.ಐ ಕದ್ರಾ ವೃತ್ತ ರವರ ತಂಡವು ರೈಲ್ವೆ ಪೊಲೀಸ್ (Railway police) ಮತ್ತು ದೆಹಲಿ (Delhi) ಪೊಲೀಸರ ಸಹಾಯದೊಂದಿಗೆ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿತರನ್ನು (Three arrest) ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಬಿಹಾರ (Bihar)ದವರಾಗಿದ್ದರೆ, ಮತ್ತೊಬ್ಬ ಅಸ್ಸಾಂ (Assam) ರಾಜ್ಯದವನಾಗಿದ್ದಾನೆ. ಬಿಹಾರ ರಾಜ್ಯದವರಾದ ಅಜ್ಮಲ ತಂದೆ ಜಾಬೀರ (೨೪), ಮಾಸೂಮ್ ತಂದೆ ಮಂಜೂರ್ (೨೩) ನವದೆಹಲಿಯಲ್ಲಿ (New Delhi) ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪಿ.ಐ ಕಾರವಾರ ನಗರ ಪೊಲೀಸ್ ಠಾಣೆ ನೇತೃತ್ವದ ತಂಡವು ಮತ್ತೊಬ್ಬ ಆರೋಪಿಯಾದ ಅಸ್ಸಾಂ ಮೂಲದ ಲಕ್ಷ ಜ್ಯೋತಿನಾಥ ತಂದೆ ಕೀನಾರಾಮನಾಥ (೩೧) ಎಂಬಾತನನ್ನು ಇಂದು ಸೆ. ೨೫ ರಂದು ಗೋವಾದ ಮಡಗಾಂವದಲ್ಲಿ (Madagaon) ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಐ.ಆರ್.ಬಿ. ಕಾಮಗಾರಿ ಮಾಹಿತಿ ನೀಡದಿದ್ದರೆ ಹೋರಾಟ
ಒಂದು ಲಕ್ಷ ರೂ. ಬಹುಮಾನ : ತನಿಖೆಯ ವೇಳೆ ಈ ಕೊಲೆಯು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಆಗಿರುವುದಾಗಿ ತಿಳಿದು ಬಂದಿದೆ. ಈ ಪ್ರ್ರಕರಣದಲ್ಲಿ ಕೊಲೆಯ ಹಿಂದಿರುವ ಕಾರಣ, ಕೊಲೆ ಮಾಡಿದ ಆರೋಪಿತರ ಬಗ್ಗೆ ಯಾವುದೇ ಸುಳಿವು ಇಲ್ಲದಿದ್ದರೂ ಅತ್ಯಂತ ಚಾಣಾಕ್ಷತೆಯಿಂದ ಅತೀ ಶೀಘ್ರವಾಗಿ ಪ್ರಕರಣವನ್ನು ಭೇದಿಸಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಸುಪಾರಿ ಕೊಲೆಯ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿ ಆರೋಪಿತರನ್ನು ವಶಕ್ಕೆ ಪಡೆದ ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಪೊಲೀಸ್ ಮಹಾನಿರ್ದೇಶಕ (DG & IGP) ಅಲೋಕ ಮೋಹನ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ : ಮಾಜಿ ಎಮ್ಮೆಲ್ಸಿ ಶುಭಲತಾ ಅಸ್ನೋಟಿಕರ ನಿಧನ