ಉಡುಪಿ (Udupi) : ಬ್ರಹ್ಮಾವರ (Brahmavar) ತಾಲೂಕಿನ ವಂಡಾರು ಬಳಿ ವನ್ಯಜೀವಿಗಳ ಬೇಟೆಗೆ ಯತ್ನಿಸಿದ ಭಟ್ಕಳ (Bhatkal) ಮತ್ತು ಶಿರೂರು ಮೂಲದ ಮೂವರನ್ನು ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಬಂಧಿಸಿದ್ದಾರೆ (Three arrest). ಭಟ್ಕಳದ ಮುಂಡಳ್ಳಿಯ ಮೊಹಮ್ಮದ್ ಅಶ್ರಫ್ ಅಲಿಯಾಸ್ ಮಾವಿಯಾ (೨೩), ಶಿರೂರು ನಿವಾಸಿ ವಾಸಿಂ ಅಕ್ರಂ (೩೪), ಅಲಿ ಬಾಪು ಯಾಸಿನ್ (೩೬) ಬಂಧಿತ ಆರೋಪಿಗಳು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

೧೧ ಜೀವಂತ ಕಾಟ್ರಿಡ್ಜ್‌ಗಳು, ನಾಲ್ಕು ಚಾಕುಗಳು, ಮಾಂಸವನ್ನು ಕಡಿಯಲು ಒಂದು ಮಚ್ಚೆ, ಬ್ಯಾಟರಿ ಮತ್ತು ಮೂರು ಮೊಬೈಲ್ ಫೋನ್‌ಗಳು ಸೇರಿದಂತೆ ಅಕ್ರಮ ಬೇಟೆ ಉಪಕರಣಗಳನ್ನು ಸಾಗಿಸುತ್ತಿದ್ದ ಮೂವರು ಸಿಕ್ಕಿಬಿದ್ದಿದ್ದಾರೆ (three arrest). ಹೆಚ್ಚುವರಿಯಾಗಿ, ಕಾರ್ಯಾಚರಣೆಯ ಸಂದರ್ಭದಲ್ಲಿ ಆರೋಪಿಗಳು ಬಳಸುತ್ತಿದ್ದ ಆಟೋರಿಕ್ಷಾವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : Kumbh Mela/ ಪ್ರಯಾಗರಾಜ್‌ಗೆ ತೆರಳಿದ ಕಾಸ್ಮುಡಿ ಕುಟುಂಬ

ತನಿಖೆ ಮುಂದುವರಿದಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಡಿ.ದಿನೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ವಲಯ ಅರಣ್ಯಾಧಿಕಾರಿಗಳಾದ ಜ್ಯೋತಿ, ಸಂದೇಶ್ ಕುಮಾರ್ ಮತ್ತು ಗಣಪತಿ ವಿ ನಾಯ್ಕ್ ಸಹಕರಿಸಿದ್ದಾರೆ. ಆಗುಂಬೆ ವನ್ಯಜೀವಿ ವಲಯದ ತಂಡ, ಸಿದ್ದಾಪುರ ಮತ್ತು ಶಂಕರನಾರಾಯಣ ವನ್ಯಜೀವಿ ವಲಯದ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿದರು.

ಇದನ್ನೂ ಓದಿ : Murudeshwar/ ನೇಣು ಬಿಗಿದುಕೊಂಡು ಸಾವಿಗೆ ಶರಣಾದ