ಮುಂಡಗೋಡ (Mundgod):  ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮೂರು ಮಕ್ಕಳಿಗೆ ಭಾನುವಾರ ಹುಚ್ಚು ನಾಯಿಯೊಂದು ಕಡಿದಿದೆ (Dog bite). ಗಾಯಗೊಂಡ ಮಕ್ಕಳಿಗೆ ಮುಂಡಗೋಡು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಇಬ್ಬರನ್ನು ಹುಬ್ಬಳ್ಳಿಯ (Hubballi) ಕಿಮ್ಸ್‌ (KIMS Hospital) ಆಸ್ಪತ್ರೆಗೆ ಸಾಗಿಸಲಾಗಿದೆ.
ಮುಂಡಗೋಡು ಪಟ್ಟಣದ ಕಿಲ್ಲೆ ಓಣಿಯ ಶಾದಾಬ ಸಮೀರ ನಿಗೋಣಿ (೬), ಲಂಬಾಣಿ ತಾಂಡಾದ ಅನನ್ಯ ಲಮಾಣಿ (೪) ಮತ್ತು ಕಿಲ್ಲೆ ಓಣಿಯ ಮತ್ತೊಬ್ಬ ಬಾಲಕ ಹುಚ್ಚು ನಾಯಿಯ ದಾಳಿಗೆ ಒಳಗಾದವರು.  ಮೂವರೂ ಮನೆಯ ಎದುರಿನ ಅಂಗಳದಲ್ಲಿ ಆಟವಾಡುತ್ತಿದ್ದಾಗ  ಹುಚ್ಚು ನಾಯಿ ಈ ಮೂವರ ಮೇಲೆ ದಾಳಿ ನಡೆಸಿದೆ (Dog bite). ಸ್ಥಳೀಯರು ಹುಚ್ಚು ನಾಯಿಯನ್ನು ಓಡಿಸಿ, ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪೈಕಿ ಗಂಭೀರ ಗಾಯಗೊಂಡ ಶಾದಾಬ ಮತ್ತು ಅನನ್ಯ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ವಿಡಿಯೋ ಸಹಿತ ಇದನ್ನೂ ಓದಿ : Farewell/ ಪಿ.ಐ.ಗೆ ಹೃದಯಸ್ಪರ್ಶಿ ಬೀಳ್ಕೊಡುಗೆ