ಬೆಳಗಾವಿ : ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಹುಲಿ “ಶೌರ್ಯ” ರವಿವಾರ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿರುವ (Tiger death) ಬಗ್ಗೆ ವರದಿಯಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭೂತರಾಮನಹಟ್ಟಿಯಲ್ಲಿರುವ ಕಿರು ಮೃಗಾಲಯದಲ್ಲಿದ್ದ (Zoo) ೧೩ ವರ್ಷದ ಈ ಶೌರ್ಯ ಎಂಬ ಗಂಡು ಹುಲಿ ಸಾವು ಕಂಡಿದೆ (Tiger death). ಅಪರೂಪದ ರೋಗದಿಂದ ಬಳಲುತ್ತಿದ್ದ ಈ ಹುಲಿಗೆ ಕಳೆದ ೨೧ ದಿನಗಳಿಂದ ತಜ್ಞ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ವರ್ಷವೂ ಇಂತಹ ಆರೋಗ್ಯ ಸಮಸ್ಯೆಯಿಂದ ಈ ಹುಲಿ ಬಳಲುತ್ತಿತ್ತು. ಆಗ ಚಿಕಿತ್ಸೆ ನೀಡಿದಾಗ ಗುಣಮುಖವಾಗಿತ್ತು. ಆದರೆ ಈ ವರ್ಷ ಮತ್ತೆ ಕಾಯಿಲೆ ಕಾಣಿಸಿಕೊಂಡಿದೆ.
ಇದನ್ನೂ ಓದಿ : ಭಾಗವತಿಕೆ ಮಾಡುತ್ತಿದ್ದಾಗಲೇ ಎದೆ ನೋವಿನಿಂದ ಸಾವು
೨೦೨೧ರಲ್ಲಿ ಬನ್ನೇರುಘಟ್ಟ (Bannerughatta) ಮೃಗಾಲಯದಿಂದ ಬೆಳಗಾವಿ ಕಿರು ಮೃಗಾಲಯಕ್ಕೆ ಈ ಹುಲಿಯನ್ನು ತರಲಾಗಿತ್ತು. ಮೂರು ವರ್ಷಗಳಿಂದ ಪ್ರವಾಸಿಗರು ಈ ಹುಲಿಯ ಚಲನ ವಲನಗಳನ್ನು ಕಂಡು ಸಂತಸ ಪಡುತ್ತಿದ್ದರು. ಆದರೆ, ಅದು ಇನ್ನು ನೆನಪು ಮಾತ್ರ. ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಂತರ ಕೇಂದ್ರ ಸರಕಾರದ ನಿಯಮದಂತೆ ಮೃಗಾಲಯದ ಆವರಣದಲ್ಲೇ ಅಂತ್ಯಕ್ರಿಯೆ ಮಾಡಲಾಗಿದೆ. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಆಗಿರುವ ಮಾರಿಯಾ ಕ್ರಿಷ್ಟು ರಾಜಾ, ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಬಾಳೆಹೊಸೂರು, ವಲಯ ಅರಣ್ಯ ಅಧಿಕಾರಿ ಪವನ್ ಕರನಿಂಗ, ಮೃಗಾಲಯದ ವೈದ್ಯ ಡಾ. ನಾಗೇಶ ಹುಯಿಲಗೋಳ, ಪಶು ವೈದ್ಯಕೀಯ ಇಲಾಖೆ ವೈದ್ಯ ಡಾ.ಪ್ರಶಾಂತ ಕಾಂಬಳೆ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಅಂತಾರಾಜ್ಯ ದರೋಡೆಕೋರರ ಕಾಲಿಗೆ ಗುಂಡೇಟು