ಧಾರವಾಡ (Dharwad) : ರಾಷ್ಟ್ರ ಧ್ವಜಕ್ಕೆ (National Flag) ಅವಮಾನ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಟಿಪ್ಪು ಧ್ವಜಕ್ಕಿಂತ (Tippu Flag) ಕೆಳಮಟ್ಟದಲ್ಲಿ ರಾಷ್ಟ್ರ ಧ್ವಜ ಆರೋಹಣ ಮಾಡಿರುವ ಘಟನೆ ಧಾರವಾಡದ ರೀಗಲ್ ಸರ್ಕಲ್ ನಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈದ್ ಮಿಲಾದ್ (Eid Milad) ವೇಳೆ ರೀಗಲ್ ವೃತ್ತದಲ್ಲಿ ಟಿಪ್ಪು ಧ್ವಜ (Tippu Flag) ಹಾಕಲಾಗಿತ್ತು. ಇಂದು ಗಾಂಧಿ ಜಯಂತಿ (Gandhi Jayanti) ನಿಮಿತ್ತ ಅದೇ ವೃತ್ತದಲ್ಲಿ ರಾಷ್ಟ್ರಧ್ವಜ ಹಾರಾಡಿಸಲಾಗಿದೆ. ಆದರೆ ಅದು ಟಿಪ್ಪು ಧ್ವಜಕ್ಕಿಂತ ಕೆಳಮಟ್ಟದಲ್ಲಿ ಹಾರಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರ ಧ್ವಜದ ಮೇಲೆ ಯಾವುದೇ ಧ್ವಜ ಇರಬಾರದೆಂಬ ನಿಯಮವಿದ್ದರೂ ನಿಯಮ ಪಾಲಿಸದೇ ಅಗೌರವ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಭಜರಂಗ ದಳ (Bhajarang dal) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಟಿಪ್ಪು ಧ್ವಜ ತೆರವುಗೊಳಿಸಲಾಗಿದೆ.
ಇದನ್ನೂ ಓದಿ : ವಿದ್ಯುತ್ ತಂತಿ ತಗುಲಿ ಯುವಕ ಸಾವು
ಈದ್ ಮಿಲಾದ್ ವೇಳೆ ಸರ್ಕಲ್ ನಲ್ಲಿರೋ ಸ್ಥಂಭಕ್ಕೆ ಟಿಪ್ಪು ಧ್ವಜ ಅಳವಡಿಸಲಾಗಿತ್ತು. ಇಂದು ಅದೇ ಸ್ಥಂಭದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಅಬ್ದುಲ್ ಕಲಾಂ ಸಾಂಸ್ಕೃತಿಕ ವೇದಿಕೆಯಿಂದ ಗಾಂಧಿ ಜಯಂತಿ ಏರ್ಪಡಿಸಲಾಗಿತ್ತು. ಗಾಂಧಿ ಫೋಟೊ ಇಟ್ಟು ವೃತ್ತದ ಸುತ್ತ ರಾಷ್ಟ್ರ ಧ್ವಜ ಅಳವಡಿಸಲಾಗಿತ್ತು. ಆದರೆ ರಾಷ್ಟ್ರ ಧ್ವಜಗಳ ಮೇಲೆ ಹಾಗೇ ಬಿಟ್ಟಿದ್ದ ಟಿಪ್ಪು ಧ್ವಜ ಹಾರಾಡುತ್ತಿತ್ತು.
ಇದನ್ನೂ ಓದಿ : ಐಸಿಎಸ್ಇ ಪಠ್ಯಪುಸ್ತಕದಲ್ಲಿ ಕವಿ ಶ್ರೀಧರ ಶೇಟ್ ಕವನ
ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಭಜರಂಗ ದಳ ಕಾರ್ಯಕರ್ತರು ಪೊಲೀಸರನ್ನು ಆಗ್ರಹಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ರೀಗಲ್ ವೃತ್ತಕ್ಕೆ ಟಿಪ್ಪು ಸರ್ಕಲ್ ಎಂದು ಸಹ ಕರೆಯಲಾಗುತ್ತದೆ. ಟಿಪ್ಪು ಸರ್ಕಲ್ ಹೆಸರಿನ ಕಾರಣಕ್ಕೆ ಟಿಪ್ಪು ಹೆಸರಿನಲ್ಲೇ ವೃತ್ತ ಸ್ಥಂಭ ಅಳವಡಿಸಲಾಗಿದೆ. ಧಾರವಾಡ ಶಹರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : Meesho App / ಆನ್ಲೈನ್ ಶಾಪಿಂಗ್ನಲ್ಲಿ ೬೩ ಸಾವಿರ ರೂ. ವಂಚನೆ